Subramanya: ಕೊಠಡಿ ಬಾಡಿಗೆ ಪಡೆಯದಿದ್ದಕ್ಕೆ ಯಾತ್ರಿಕನ ಮೇಲೆ ಹಲ್ಲೆ

Subramanya: ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕ್ಷುಲ್ಲಕ ಕಾರಣಕ್ಕೆ ಯಾತ್ರಿಕನೊಬ್ಬನ ಮೇಲೆ ಕೊಠಡಿ ನಿರ್ವಾಹಕರ ಗುಂಪೊಂದು ಅಮಾನವೀಯವಾಗಿ ಹಲ್ಲೆ ಮಾಡಲಾಗಿದೆ ಎಂದು ವರದಿಯಾಗಿದೆ. ದೇವರ ಸನ್ನಿಧಿಯ ಪಾವಿತ್ರ್ಯಕ್ಕೆ ಕಳಂಕ ತಂದಿದೆ. ಈ ದೌರ್ಜನ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಕ್ಷೇತ್ರಕ್ಕೆ ಬಂದ ಯುವಕನೋರ್ವ ಆದಿ ಸುಬ್ರಹ್ಮಣ್ಯ ಪ್ರದೇಶದಲ್ಲಿ ವಸತಿಗಾಗಿ ಕೊಠಡಿಯನ್ನು ವೀಕ್ಷಿಸಿದ್ದು, ನಂತರ ಬಾಡಿಗೆ ಪಡೆಯಲು ನಿರಾಕರಿಸಿದ್ದು ಹೊರನಡೆದಿದ್ದಾನೆ. ಈ ಕಾರಣದಿಂದ ಕೆರಳಿದ ಕೊಠಡಿ ನಿರ್ವಾಹಕರ ತಂಡ, ಯುವಕನನ್ನು ಅಡ್ಡಗಟ್ಟಿ ವಾಗ್ವಾದ ಮಾಡಿದೆ. ʼಕೊಠಡಿ ನೋಡಿ ಸುಮ್ಮನೆ ಹೋಗುತ್ತೀಯಾ?ʼ ಎಂದು ದರ್ಪದಿಂದ ಪ್ರಶ್ನೆ ಮಾಡಿದ್ದಾರೆ. ನಂತರ ಜಗಳ ಆಗಿ ಯುವಕನ ಮೇಲೆ ಹಲ್ಲೆ ಮಾಡಲಾಗಿದೆ. ಗುಂಪಿನಲ್ಲಿದ್ದ ಓರ್ವ ವ್ಯಕ್ತಿ ಯುವಕನ ಕೆನ್ನೆಗೆ ಬಾರಿಸುವ ದೃಶ್ಯಗಳು ವಿಡಿಯೋದಲ್ಲಿದೆ.
ಸ್ಥಳೀಯರು ಪೊಲೀಸ್ ಇಲಾಖೆ ಅಥವಾ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಮಧ್ಯಪ್ರವೇಶ ಮಾಡಿ ಹಲ್ಲೆ ಮಾಡಿದವರನ್ನು ಬಂಧನ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
Comments are closed.