Mandya: ಮಂಡ್ಯದ ಜನತೆಗೆ ‘ಬೌ ಬೌ ಬಿರಿಯಾನಿ’ ತಿನ್ನಿಸುತ್ತಿದ್ದ ಅನ್ಯಕೋವಿನ ವ್ಯಕ್ತಿ- ಹೋಟೆಲ್ ನಲ್ಲಿ ನಾಯಿ ಮಾಂಸದೊಟ್ಟಿಗೆ ಸಿಕ್ಕಿಬಿದ್ದ ಮಾಲೀಕ!!

Share the Article

Mandya: ಮಂಡ್ಯದ ಹೋಟೆಲ್ ಒಂದರಲ್ಲಿ ನಾಯಿಮಾಂಸವನ್ನು ಬಿರಿಯಾನಿ ಮಾಡಿ ಅನ್ಯಕೋಮಿನ ವ್ಯಕ್ತಿಯೊಬ್ಬ ಜನರಿಗೆ ತಿನಿಸುತ್ತಿದ್ದು, ಇದೀಗ ಮಾಂಸ ಸಮೇತವಾಗಿ ರೆಡ್ ಹ್ಯಾಂಡ್ ಆಗಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.

ಹೌದು, ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಚಿನಕುರಳಿ ಗ್ರಾಮದಲ್ಲಿ ಈ ರೀತಿಯ ಘಟನೆ ನಡೆದಿದೆ. ಮದೀನಾ ಹೆಸರಿನ ಹೋಟೇಲ್ ನಡೆಸ್ತಿದ್ದ ಅನ್ಯಕೋಮಿನ ಅಜಾದ್ ಎಂಬ ವ್ಯಕ್ತಿಯು, ತನ್ನ ಹೋಟೇಲ್ ನಲ್ಲಿ ಬಿರಿಯಾನಿಗೆ ನಾಯಿ ಮಾಂಸ ಬೆರಿಸಿ ಜನರಿಗೆ ತಿನ್ನಿಸ್ತಿದ್ದ ಆರೋಪ ಕೇಳಿ ಬಂದಿದೆ. ಬಿರಿಯಾನಿ ತಿಂದ ಕೆಲ ಗ್ರಾಹಕರಿಗೆ ಮಾಂಸದ ರುಚಿಯಲ್ಲಿ ವ್ಯತ್ಯಾಸ ಕಂಡು ಬಂದಿದ್ದು, ನಾಯಿ ಮಾಂಸ ಇರಬಹುದು ಎನ್ನುವ ಶಂಕೆ ವ್ಯಕ್ತಪಡಿಸಿದ್ದಾರೆ. ಇಂದು ನಾಯಿ ಮಾಂಸದ ಸಾಕ್ಷಿಯೊಂದಿಗೆ ಜನರ ಕೈಗೆ ಆರೋಪಿ ಸಿಕ್ಕಿ ಬಿದ್ದಿದ್ದಾನೆ.

ಇಂದು ಕೆಲ ಗ್ರಾಹಕರು ಒಟ್ಟಾಗಿ ಮದೀನಾ ಹೋಟೆಲ್ ಮೇಲೆ ದಾಳಿ ಮಾಡಿದಾಗ ನಾಯಿ ಮಾಂಸದ ಸಾಕ್ಷಿಯೊಂದಿಗೆ ಆರೋಪಿ ಆಜಾದ್ ಗ್ರಾಹಕರ ಕೈಗೆ ಸಿಕ್ಕಿಬಿದ್ದಿದ್ದಾನೆ ಎನ್ನಲಾಗಿದೆ. ಬಿರಿಯಾನಿಗೆ ನಾಯಿ ಮಾಂಸ ಬೆರೆಸುತ್ತಿದ್ದ ಆಜಾದ್‌ನನ್ನು ಗ್ರಾಹಕರು ಹಿಡಿದು ಥಳಿಸಿದ್ದಾರೆ.

ಘಟನಾ ಸ್ಥಳಕ್ಕೆ ಪಾಂಡವಪುರ ನಗರ ಪೊಲೀಸ್ ಠಾಣೆಯ ಸಿಬ್ಬಂದಿ ದೌಡಾಯಿಸಿದ್ದು, ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಸದ್ಯ ಪ್ರಕರಣ ದಾಖಲಾಗಿದ್ದು, ಪೊಲೀಸರ ತನಿಖೆಯಲ್ಲಿ ಸತ್ಯಾಂಶ ತಿಳಿದು ಬರಬೇಕಿದೆ.

Comments are closed.