Kashi Vishwanath Temple: ಕಾಶಿ ವಿಶ್ವನಾಥ ದೇಗುಲದಲ್ಲಿ 21 ಮಂದಿ ನಕಲಿ ಅರ್ಚಕರು ಅರೆಸ್ಟ್

Kashi Vishwanath Temple: ಸುಲಭವಾಗಿ ದೇವರ ದರ್ಶನ ಮಾಡಿಸುತ್ತೇವೆ ಎಂದು ಜನರಿಂದ ಹಣ ವಸೂಲಿ ಮಾಡುತ್ತಿದ್ದ 21 ಅರ್ಚಕರನ್ನು ಕಾಶಿ ವಿಶ್ವನಾಥ ದೇವಾಲಯದಲ್ಲಿ ಬಂಧಿಸಲಾಗಿದೆ.
ದೇಗುಲದ ಆವರಣದಲ್ಲಿ ಇದ್ದುಕೊಂಡು ಬೇಗ ದರ್ಶನ ಮಾಡಿಸುತ್ತೇವೆ ಹಾಗೂ ಪೂಜೆಗಳನ್ನು ಮಾಡಿಸುತ್ತೇವೆ ಎಂದು ಸುಳ್ಳು ಹೇಳಿ ಭಕ್ತರ ಬಳಿ ಹಣ ಪೀಕುತ್ತಿದ್ದ ಹಾಗೂ ಆವರಣದಲ್ಲಿ ಇದ್ದುಕೊಂಡು ಅನುಚಿತವಾಗಿ ವಿವರಿಸುತ್ತಿದ್ದ 21 ಅರ್ಚಕರ ನಕಲಿ ಎಂದು ಗುರುತಿಸಲಾಗಿದ್ದು ಅವರನ್ನು ಬಂಧಿಸಲಾಗಿದೆ.
ಹಾಗೂ ದೇಗುಲದಲ್ಲಿ ತಮ್ಮ ಕಾರ್ಯಚರಣೆ ಮುಂದುವರೆದಿದ್ದು ಈ ರೀತಿಯ ನಕಲಿ ಅರ್ಚಕರು ಸಿಕ್ಕಿದಲ್ಲಿ ಅವರನ್ನು ಬಂಧಿಸುತ್ತೇವೆ ಎಂದು ಎಸಿಪಿ ಮಾಹಿತಿ ನೀಡಿದ್ದಾರೆ.
Comments are closed.