Plastic Milk : ಪ್ಲಾಸ್ಟಿಕ್ ಹಾಲನ್ನು ಪದೇಪದೇ ಬಿಸಿ ಮಾಡುತ್ತೀರಾ? ಇದು ಎಷ್ಟು ಅಪಾಯ ಗೊತ್ತಾ?

Share the Article

Plastic Milk :ನಮ್ಮ ದೈನಂದಿನ ಆಹಾರಗಳಲ್ಲಿ ಹಾಲು ಅತ್ಯಂತ ಪ್ರಮುಖ ಪದಾರ್ಥ. ಅತಿ ಹೆಚ್ಚು ಪೋಷಕಾಂಶಗಳನ್ನು ನೀಡುವ ಆಹಾರದಲ್ಲಿ ಇದೇ ಮೊದಲಿನದು. ಇಂದು ನಾವು ಹಾಲನ್ನು ಪ್ಯಾಕೆಟ್ ಮುಖಾಂತರ ಖರೀದಿಸುತ್ತೇವೆ. ಅಂದರೆ ನಂದಿನಿ, ಅಮುಲ್ ನಂತಹ ಪ್ರಮುಖ ಹಾಲು ಉತ್ಪನ್ನ ಮಾರುಕಟ್ಟೆಗಳು ನಮಗೆ ಪ್ಯಾಕೆಟ್ ಮೂಲಕ ಹಾಲನ್ನು ಪೂರೈಸುತ್ತದೆ.

ಹಾಲಿನಲ್ಲಿ ಕ್ಯಾಲ್ಸಿಯಂ, ಪ್ರೋಟೀನ್, ವಿಟಮಿನ್ ಎ, ವಿಟಮಿನ್ ಡಿ, ವಿಟಮಿನ್ ಬಿ12, ಪೊಟ್ಯಾಸಿಯಂ, ಮೆಗ್ನೀಷಿಯಂ ಮುಂತಾದ ಹಲವಾರು ಪೋಷಕಾಂಶಗಳಿರುತ್ತವೆ. ಮಕ್ಕಳಿಂದ ವಯಸ್ಕರ ತನಕ ಎಲ್ಲರಿಗೂ ಹಾಲಿನ ಉಪಯೋಗ ಬಹುಮುಖಿ ಎಂದು ಪರಿಗಣಿಸಲಾಗಿದೆ. ಆದರೆ ನಗರವಾಸಿಗಳಿಗೆ ಪ್ಯಾಕೆಟ್ ಹಾಲೆ ಗತಿ. ಅಂದ ಹಾಗೆ ನೀವು ಪ್ಯಾಕೆಟ್ ಹಾಲನ್ನು ಪದೇ ಪದೇ ಬಿಸಿ ಮಾಡುತ್ತೀರಾ? ಇದು ಎಷ್ಟು ಅಪಾಯ ಗೊತ್ತ?

ಪ್ಯಾಕೆಟ್ ಹಾಲನ್ನು ಬಿಸಿ ಮಾಡುವುದರಿಂದ ಆಗುವ ನಷ್ಟ:

ಹೆಚ್ಚು ಬಿಸಿ ಮಾಡಿದರೆ ಹಾಲು ಬ್ಯಾಕ್ಟೀರಿಯಾ ರಹಿತವಾಗುತ್ತದೆ ಎಂಬ ನಂಬಿಕೆ ತಪ್ಪು. ವಾಸ್ತವವಾಗಿ, ಪ್ಯಾಕ್ ಮಾಡಿದ ಹಾಲನ್ನು ತಯಾರಿಸುವಾಗ ಮೊದಲೇ ಪಾಶ್ಚರೀಕರಣ (Pasteurization) ಮತ್ತು homogenization ಪ್ರಕ್ರಿಯೆಗಳನ್ನು ಅನುಸರಿಸಲಾಗುತ್ತದೆ, ಅಂದರೆ ಹಾಲು ಮೊದಲೇ ಬ್ಯಾಕ್ಟೀರಿಯಾ ಮುಕ್ತವಾಗಿದೆ. ಆದ್ದರಿಂದ ಹೆಚ್ಚಾಗಿ ಕುದಿಸುವ ಅಗತ್ಯವಿಲ್ಲ.

ಹಾಗೂ, ಹಾಲಿನಲ್ಲಿ ಇರುವ ವಿಟಮಿನ್‌ಗಳು ಮತ್ತು ಪ್ರೋಟೀನ್ ಹೆಚ್ಚಾಗಿ ಬಿಸಿ ಮಾಡಿದಾಗ ನಷ್ಟವಾಗುತ್ತವೆ. ಈ ಪೋಷಕಾಂಶಗಳು ದೇಹದ ಶಕ್ತಿ, ಮೂಳೆ ಬಲ ಮತ್ತು ಆರೋಗ್ಯಕ್ಕೆ ಮುಖ್ಯ. ಆದ್ದರಿಂದ, ಪ್ಯಾಕ್ ಹಾಲನ್ನು ಕುಡಿಯುವ ಮುನ್ನ ಸ್ವಲ್ಪ ಬಿಸಿ ಮಾಡುವಷ್ಟೇ ಸಾಕು. ಪದೇ ಪದೇ ಅಥವಾ ಹೆಚ್ಚು ಕುದಿಸುವುದರಿಂದ ಹಾಲಿನ ರುಚಿ ಮತ್ತು ಪೌಷ್ಟಿಕಾಂಶ ಕಳೆಯಬಹುದು.

ಹಾಲಿನಿಂದ ಚೀಸ್, ಖೋಯಾ, ಸಿಹಿತಿಂಡಿಗಳನ್ನು ತಯಾರಿಸುವಾಗ ಮಾತ್ರ ಹೆಚ್ಚಿನ ಬಿಸಿಗೆ ಒಳಪಡಿಸುವುದು ಸೂಕ್ತ. ದೈನಂದಿನ ಕುಡಿಯುವ ಹಾಲಿಗೆ ಇದು ಅಗತ್ಯವಿಲ್ಲ. ಸರಿಯಾದ ರೀತಿಯಲ್ಲಿ ಪ್ಯಾಕ್ ಹಾಲನ್ನು ಬಳಸುವುದರಿಂದ ದೇಹಕ್ಕೆ ಬೇಕಾದ ಪೋಷಕಾಂಶ ದೊರೆಯುತ್ತವೆ ಮತ್ತು ಆರೋಗ್ಯ ಸವಾಲುಗಳಿಂದ ದೂರ ಇರುತ್ತೇವೆ.

ಪ್ಯಾಕ್ ಮಾಡಿದ ಹಾಲನ್ನು ಸುರಕ್ಷಿತವಾಗಿ ಕುಡಿಯಲು ಅದರ ಮೂಲ ಗುಣಲಕ್ಷಣಗಳ ಕುರಿತಾಗಿ ಸರಿಯಾದ ಅರಿವು ಇರಬೇಕು. ಹೆಚ್ಚಾಗಿ ಕುದಿಸುವುದನ್ನು ತಪ್ಪಿಸಿ, ಸ್ವಲ್ಪ ಬಿಸಿ ಮಾಡಿದರೆ ಹಾಲಿನ ಪೋಷಕಾಂಶಗಳು ಉಳಿಯುತ್ತವೆ ಮತ್ತು ದೇಹಕ್ಕೆ ಬೇಕಾದ ಉಪಯೋಗವನ್ನು ನೀಡುತ್ತದೆ. ಹೀಗಾಗಿ ಪ್ಯಾಕ್ ಹಾಲಿನ ಸರಿಯಾದ ಬಳಕೆಯಿಂದ ಆರೋಗ್ಯಕರ ಜೀವನ ಶೈಲಿಯನ್ನು ಅನುಸರಿಸಬಹುದು.

Comments are closed.