Mangalore: Yakshagana: ತೆಂಕು ತಿಟ್ಟಿನ ಪ್ರಸಿದ್ಧ ಹಾಸ್ಯಗಾರ ಪದ್ಮನಾಭ ಶೆಟ್ಟಿಗಾರ್‌ ನಿಧನ

Share the Article

Mangalore: ತೆಂಕುತಿಟ್ಟಿನ ಪ್ರಸಿದ್ಧ ಹಾಸ್ಯಗಾರ ಸಿದ್ಧಕಟ್ಟೆ ಪದ್ಮನಾಭ ಶೆಟ್ಟಿಗಾರ್‌ ಇಂದು (ಭಾನುವಾರ) ಜೂ.8 ಕ್ಕೆ ನಿಧನ ಹೊಂದಿದ್ದಾರೆ. ಇವರಿಗೆ 70 ವರ್ಷ ವಯಸ್ಸಾಗಿತ್ತು.

ಕುಂಡಾವು, ಸುಬ್ರಹ್ಮಣ್ಯ, ಕೊಲ್ಲೂರು, ಸುಂಕದಕಟ್ಟೆ, ಸುರತ್ಕಲ್‌, ಕಟೀಲು ಮೇಳ ಹೀಗೆ ಸುಮಾರು ಐದು ದಶಕ ಯಕ್ಷಗಾನ ತಿರುಗಾಟ ಮಾಡಿದ ಕೀರ್ತಿ ಇವರಿಗೆ. ಇವರು ಕೊರಗದಾಸ ಅವರನ್ನು ಯಕ್ಷಗಾನ ತರಬೇತಿಯನ್ನು ಪಡೆದಿದ್ದರು. ಕನ್ನಡ, ತುಳು ಭಾಷೆಯಲ್ಲಿ ನಿರ್ವಹಣೆ ಮಾಡುತ್ತಿದ್ದರು.

ಮೂಕಾಸುರ, ವಿಜಯ, ದಾರುಕ, ಪಾಪಣ್ಣ, ಬಾಹುಕ ಹೀಗೆ ಹಲವು ಪಾತ್ರಗಳ ಮೂಲಕ ಕಲಾಭಿಮಾನಿಗಳನ್ನು ಇವರು ರಂಜಿಸಿದ್ದಾರೆ. ಯಕ್ಷಗಾನ ಕಲಾರಂಗ ಪ್ರಶಸ್ತಿ ಜೊತೆಗೆ ಒಂದು ವಾರದ ಹಿಂದೆ ಉಡುಪಿ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ʼಸುವರ್ಣ ಪುರಸ್ಕಾರʼ ಇವರಿಗೆ ಲಭಿಸಿದೆ.

ಪತ್ನಿ ಮತ್ತು ಇಬ್ಬರು ಪುತ್ರರು, ಅಭಿಮಾನಿಗಳನ್ನು ಅಗಲಿದ್ದಾರೆ.

Comments are closed.