IPL-2025: ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡು ಫೈನಲ್ ಗೆದ್ದಿತೇ RCB? ಇಲ್ಲಿದೆ ಅನುಮಾನಕ್ಕೆ ಕಾರಣ

Share the Article

IPL-2025 ಫೈನಲ್ ಮ್ಯಾಚ್ ನಲ್ಲಿ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡು ಆರ್‌ಸಿಬಿ ಪಂಜಾಬ್ ವಿರುದ್ಧ ಗೆಲುವು ಸಾಧಿಸಿದೆ ಎಂಬ ಆರೋಪ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲಾಗುತ್ತಿದೆ. ಇದಕ್ಕೆ ಕಾರಣ ಕೂಡ ಇದೆ.

ಹೌದು, ಫೈನಲ್ ಪಂದ್ಯ ಆರಂಭವಾಗುವುದಕ್ಕೆ ಮೊದಲೇ ಆರ್‌ಸಿಬಿ ಆಡಳಿತ ಮಂಡಳಿಯ ಕಡೆಯವರು ವಿಜಯೋತ್ಸವ ಮಾಡುತ್ತೇವೆ ಎಂದು ನಗರ ಪೊಲೀಸರಿಗೆ ಅರ್ಜಿ ಸಲ್ಲಿಸಿರುವ ವಿಚಾರ ರಾಜ್ಯಾದ್ಯಂತ ಭಾರಿ ಸದ್ದು ಆಗುತ್ತಿದ್ದು, ಮ್ಯಾಚ್ ಫಿಕ್ಸಿಂಗ್ ಕುರಿತು ಇದು ಅನುಮಾನಕ್ಕೆಡೆಮಾಡಿಕೊಟ್ಟಿದೆ.

ಫೈನಲ್ ಮ್ಯಾಚ್ ಫಿಕ್ಸಿಂಗ್?

ಫೈನಲ್ ಪಂದ್ಯ ಗೆಲ್ಲುವ ಮುನ್ನವೇ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಸಿಎ), ಆರ್‌ಸಿಬಿ ಹಾಗೂ ಅದರ ವ್ಯವಹಾರ ನೋಡಿಕೊಳ್ಳುವ ಡಿಎನ್‌ಎ ಸಂಸ್ಥೆಯು ಸಂಭ್ರಮಾಚರಣೆಗೆ ಸಮಯಾವಕಾಶ ಹಾಗೂ ಭದ್ರತೆ ಕೋರಿತ್ತು. ಹೀಗಾಗಿ -ನಲ್ ಪಂದ್ಯ ‘ಮೊದಲೇ ಫಿಕ್ಸ್’ ಆಗಿತ್ತು ಎಂಬ ಅಂಶ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಯಾಗುತ್ತಿದೆ.

Comments are closed.