Vice-Chancellor: ವಿಶ್ವವಿದ್ಯಾಲಯದ ಕುಲಪತಿ ವಿರುದ್ಧವೇ ಜಾತಿ ನಿಂದನೆ ಕೇಸ್ – ಕುಲಪತಿ ವಿರುದ್ಧ ಎಫ್ ಐ.ಆರ್

Vice-Chancellor: ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಪತಿ ವಿರುದ್ಧವೇ ಜಾತಿ ನಿಂದನೆ ಕೇಸ್ ದಾಖಲಾಗಿದ್ದು, ಕುಲಪತಿ ನಿರಂಜನ ವಾನಳ್ಳಿ ವಿರುದ್ಧ ಗಂಭೀರ ಆರೋಪ ಮಾಡಲಾಗಿದೆ. ಅದೇ ವಿಶ್ವವಿದ್ಯಾಲಯದ ಅತಿಥಿ ಉಪನ್ಯಾಸಕ ಡಾ.ಮಂಜುನಾಥ್ ಅವರು ದೂರು ದಾಖಲಿಸಿದ್ದು, ವಿಶ್ವ ವಿದ್ಯಾಲಯದ ಅಕ್ರಮ ಬಯಲಿಗೆ ಎಳೆದಿದ್ದೇ ದ್ವೇಷಕ್ಕೆ ಕಾರಣ ಎನ್ನಲಾಗಿದೆ.

ಸಿಸಿ ಕ್ಯಾಮರಾ ಅಳವಡಿಕೆ ಖರೀದಿ ವಿಚಾರದಲ್ಲಿ 25. ಲಕ್ಷ ವಿವಿಗೆ ಉಳಿತಾಯ ಮಾಡಿದ್ದೇ ನನ್ನ ದ್ವೇಷಕ್ಕೆ ಕಾರಣವಾಗಿದ್ದು, ಸಿಂಡಿಕೇಟ್ ಸಭೆಯಲ್ಲಿ ನನ್ನ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡಲಾಗಿದೆ. ಅಲ್ಲದೆ ಮಹಿಳೆ ಜೊತೆ ಅನುಚಿತ ವರ್ತನೆ ಬಗ್ಗೆ ಗಂಭೀರ ಆರೋಪ ಮಾಡಿದ್ದು, ಈ ವಿಚಾರವಾಗಿ ನನ್ನ ವಿರುದ್ಧ ಕುಲಪತಿ ನಿರಂಜನ ವಾನಳ್ಳಿ ಜಾತಿ ನಿಂದನೆ ಮಾಡಿದ್ದಾರೆ ಎಂದು ಡಾ. ಮಂಜುನಾಥ್ ದೂರಿದ್ದಾರೆ.
ಸಿಂಡಿಕೇಟ್ ಸಭೆಯಲ್ಲಿ ನನ್ನ ವಿಷಯ ಚರ್ಚೆನೇ ಆಗಿಲ್ಲ, ಅದ್ರೂ ನನ್ನ ವಿರುದ್ಧ ವೈಯುಕ್ತಿಕ ದ್ವೇಷ, ಜಾತಿ ನಿಂದನೆ ಮಾಡಿದ್ದಾರೆ ಅನ್ನೋ ಆರೋಪ ಮಂಜುನಾಥ್ ಮಾಡಿದ್ದು, ಸಮಾಜದಲ್ಲಿ ತಲೆ ಎತ್ತಿ ಓಡಾಡಲು ಆಗ್ತಾ ಇಲ್ಲ, ನನ್ನ ಘನತೆಗೆ ಧಕ್ಕೆ ತಂದಿದ್ದಾರೆ ಎಂದು ದೂರಿನಲ್ಲಿ ಮಂಜುನಾಥ್ ಉಲ್ಲೇಖ ಮಾಡಿದ್ದಾರೆ.
Comments are closed.