Puttur: ಬೆಳ್ಳಾರೆ: ವಾಟ್ಸಾಪ್ ಗ್ರೂಪಿನಲ್ಲಿ ಕೋಮು ದ್ವೇಷ ಸಂದೇಶ: ಪ್ರಕರಣ ದಾಖಲು

Share the Article

Puttur: ವಾಟ್ಸಪ್ ಗ್ರೂಪಿನಲ್ಲಿ ವ್ಯಕ್ತಿಯೋರ್ವ ವಿಭಿನ್ನ ಧರ್ಮ/ಕೋಮುಗಳ ನಡುವೆ ವೈರತ್ವವನ್ನು ಉಂಟುಮಾಡುವಂತಹ ಸಂದೇಶಗಳನ್ನು ಪ್ರಸಾರ ಮಾಡಿರುವ ಆರೋಪದಲ್ಲಿ ವ್ಯಕ್ತಿಯೊಬ್ಬರ ವಿರುದ್ದ ಪ್ರಕರಣ ದಾಖಲಾಗಿದೆ.

ಮಂಗಳೂರು ನ್ಯೂಸ್ 24X7 ಎಂಬ ಹೆಸರಿನ ವಾಟ್ಸ್ ಅಪ್ ಗ್ರೂಪಿನಲ್ಲಿ ವ್ಯಕ್ತಿಯೋರ್ವ ವಿಭಿನ್ನ ಧರ್ಮ/ಕೋಮುಗಳ ನಡುವೆ ವೈರತ್ವವನ್ನು ಉಂಟು ಮಾಡುವಂತಹ ಸಂದೇಶಗಳನ್ನು ಪ್ರಸಾರ ಮಾಡಿರುವುದು ಕಂಡುಬಂದಿರುತ್ತದೆ. ಈ ಸಂದೇಶದಿಂದ ಜಿಲ್ಲೆಯಲ್ಲಿ ಕೋಮು ಸೌಹಾರ್ದತೆಗೆ ದಕ್ಕೆಯಾಗುವ ಸಾಧ್ಯತೆಗಳಿರುವುದರಿಂದ, ಸದ್ರಿ ಸಂದೇಶವನ್ನು ವಾಟ್ಸಾಪ್ ಗ್ರೂಪ್ ನಲ್ಲಿ ಪ್ರಸಾರ ಮಾಡಿದಾತನ ವಿರುದ್ಧ ದಿನಾಂಕ 07.06.2025 ರಂದು ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

Comments are closed.