Shocking News: ಮಹಿಳೆ ದೇಹದಲ್ಲಿ 861 ಕಲ್ಲುಗಳು ಪತ್ತೆ..!

Share the Article

Shocking News: ಮಹಿಳೆಯ ದೇಹದಿಂದ 861 ಕಲ್ಲುಗಳನ್ನು ವೈದ್ಯರು ಹೊರ ತೆಗೆದಿರುವಂತಹ ಘಟನೆಯೊಂದು ನಗರದಲ್ಲಿ ನಡೆದಿದೆ.

ಮೈಸೂರಿನ ಕಾವೇರಿ ಆಸ್ಪತ್ರೆಯಲ್ಲಿ ವೈದ್ಯರ ತಪಾಸಣೆ ವೇಳೆ ಮಹಿಳೆಯ ಗಾಲ್ ಬ್ಲಾಡರ್ ಮತ್ತು ಬೈಲ್ ಡಕ್ಟ್​ನಲ್ಲಿ ಕಲ್ಲುಗಳು ಇರುವುದು ಪತ್ತೆ ಆಗಿದೆ. ಕೂಡಲೇ ಎಂಡೋಸ್ಕೋಪಿಕ್ ರೆಟ್ರೋಗ್ರೇಡ್​​ಕೊಲೆಂಜಿಯೊಪ್ಯಾಂಕ್ರಿಯಾಟೋಗ್ರಫಿ (ERCP) ವಿಧಾನದ ಮ‌ೂಲಕ ಶಸ್ತ್ರಚಿಕಿತ್ಸೆ ಮಾಡಿ ಕಲ್ಲುಗಳನ್ನು ಹೊರ ತೆಗೆದಿದ್ದಾರೆ.

ಗ್ಯಾಸ್ಟ್ರೋಎಂಟರಾಲಜಿಸ್ಟ್ ಡಾ.ನಿಖಿಲ್ ಕುಮಾರ್ ಜೋಗೆ ಹಾಗೂ ಲ್ಯಾಪರೊಸ್ಕೋಪಿಕ್ ಸೀನಿಯರ್ ಸರ್ಜನ್ ಡಾ. ಆರ್​ಎಂ ಅರವಿಂದ್ ಅವರ ನೇತೃತ್ವದಲ್ಲಿ ಶಸ್ತ್ರಚಿಕಿತ್ಸೆ ಮಾಡಲಾಗಿದ್ದು,​ 861 ಕಲ್ಲುಗಳನ್ನನು ಹೊರ ತೆಗೆಯಲಾಗಿದೆ. ಶಸ್ತ್ರಚಿಕಿತ್ಸೆ ನಡೆದ ಮರುದಿನವೇ ಮಹಿಳೆಯನ್ನು ಡಿಸ್ಚಾರ್ಜ್ ಮಾಡಲಾಗಿದೆ.

Comments are closed.