Traffic: ಮಕ್ಕಳಿಗೂ ಟ್ರಾಫಿಕ್ ರೂಲ್ಸ್ – ಮುಂದಿನ ವರ್ಷದಿಂದ ಪಠ್ಯ ಪುಸ್ತಕದಲ್ಲಿ ಟ್ರಾಫಿಕ್ ಬಗ್ಗೆ ಪಾಠ

Traffic: ಮುಂದಿನ ವರ್ಷದಿಂದ ಶಾಲಾ ಮಕ್ಕಳ ಪಠ್ಯ ಪುಸ್ತಕದಲ್ಲಿ ಟ್ರಾಫಿಕ್ ಬಗ್ಗೆ ಪಾಠ ಇರಲಿದೆ. ಮಕ್ಕಳಿಗೆ ಅತಿ ಮೂಕ್ಯವಾಗಿ ತಮ್ಮ ಬಾಲ್ಯವಾಸ್ಥೆಯಲ್ಲೇ ರಸ್ತೆ ನಿಯಮದ ಬಗ್ಗೆ ತಿಳಿಸದರೆ, ಮತ್ತೆ ದೊಡ್ಡವರಾದಾಗ ಈ ಬಗ್ಗೆ ಹೆಚ್ಚಿನ ಅರಿವು ಇರುತ್ತದೆ. ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆಯಿಂದ ಈ ಆದೇಶ ಹೊರ ಬಿದ್ದಿದೆ.

ರಸ್ತೆ ಸುರಕ್ಷತೆ ಬಗ್ಗೆ ಮತ್ತು ಟ್ರಾಫಿಕ್ ಬಗ್ಗೆ ಪಠ್ಯ ಅಳವಡಿಕೆಗೆ ತಯಾರಿ ನಡೆದಿದೆ. ಟ್ರಾಫಿಕ್ ಪೊಲೀಸರಿಂದ ಸಿದ್ಧಪಡಿಸಿರುವ ಪಠ್ಯ ಕ್ರಮ ಅಳವಡಿಕೆ ಮಾಡಲಾಗುವುದು. 2025-26ನೇ ಸಾಲಿನ ಪಠ್ಯ ಕ್ರಮದಲ್ಲಿ ಅಳವಡಿಕೆಯಾಗಲಿದೆ. 2,4, 6,7,9ನೇ ತರಗತಿಯ ಮಕ್ಕಳಿಗೆ ಸಂಚಾರ ಸುರಕ್ಷತೆ ಕುರಿತು ಪಠ್ಯ ಇರಲಿದೆ.
ಟ್ರಾಫಿಕ್ ಲೈಟ್, ಟ್ರಾವೆಲ್, ವೈಯುಕ್ತಿಕ ಸುರಕ್ಷತೆ, ರೋಡ್ ಸೆಫ್ಟಿ, ಸಡಕ್ ಕೀ ರಕ್ಷಾ ಸಬ್ ಕೀ ಸುರಾಕ್ಷ ಅಧ್ಯಯಗಳ ಅಳವಡಿಕೆ ಮಾಡಲಾಗುವುದು. ಪಠ್ಯಪುಸ್ತಕ ರಚನೆ ಅಥವಾ ಪರಿಕ್ಷರಣೆ ಸಮಯದಲ್ಲಿ ಸಮಿತಿ ಅಧ್ಯಕ್ಷರ ಗಮನಕ್ಕೆ ತಂದು ಮುಂದಿನ ಕ್ರಮ ತೆಗೆದುಕೊಳ್ಳಲಾಗುದೆಂದು ಹೇಳಲಾಗಿದೆ.
Comments are closed.