Uttar Pradesh: 20 ಲಕ್ಷದ ಚಿನ್ನದ ಸರವಿದ್ದ ಪರ್ಸ್ ಕಸಿದು ಪರಾರಿಯಾದ ಮಂಗ!

Share the Article

Uttar Pradesh: ಭಕ್ತರೊಬ್ಬರ ಕೈಯಲ್ಲಿದ್ದ 20 ಲಕ್ಷ ಮೌಲ್ಯದ ಚಿನ್ನದ ಸರವಿದ್ದ ಪರ್ಸ್ ಅನ್ನು ಕಸಿದುಕೊಂಡು ಮಂಗವೊಂದು ಪರಾರಿಯಾಗಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಉತ್ತರಪ್ರದೇಶದ ಅಲಿಘಡ್ ನಿವಾಸಿ ಅಭಿಷೇಕ್ ಅಗರ್ವಾಲ್ ತಮ್ಮ ಕುಟುಂಬದೊಂದಿಗೆ ಮಥುರಾ ಸಮೀಪದ ಠಾಕೂರ್ ಬ್ಯಾಂಕ್ ಬಿಹಾರಿ ದೇವಸ್ಥಾನದ ವೃಂದಾವನದ ದರ್ಶನಕ್ಕೆಂದು ಬಂದಿದ್ದು, ಆ ವೇಳೆ ಅವರ ಪತ್ನಿ ಕೈಯಲ್ಲಿದ್ದ ಪರ್ಸ್ ಕಸಿದು ಮಂಗವೊಂದು ಪರಾರಿಯಾಗಿದೆ.

ಸ್ಥಳೀಯರು ಹಾಗೂ ಭಕ್ತರು ಎಷ್ಟೇ ಪ್ರಯತ್ನ ಪಟ್ಟರೂ ಹಿಡಿಯಲು ಸಾಧ್ಯವಾಗದಿದ್ದಾಗ ಅಗರ್ವಾಲ್ ಪೊಲೀಸರಿಗೆ ಮಾಹಿತಿ ನೀಡುತ್ತಾರೆ. ನಂತರ ಪೊಲೀಸರು ಹರಸಾಹಸ ಪಟ್ಟು ಮಂಗವನ್ನು ಹಿಡಿದು, ಪರ್ಸ್ ಅನ್ನು ಹಿಂದಿರುಗಿಸಿದ್ದಾರೆ.

Comments are closed.