Snake Repellent Plants: ಮನೆ ಮುಂದೆ ಈ ಒಂದು ಹೂವಿನ ಗಿಡ ನೆಟ್ಟರೆ ಒಂದೇ ಒಂದು ಹಾವು ಸುಳಿಯಲ್ಲ

Share the Article

Snake Repellent Plants: ಮಳೆಗಾಲದಲ್ಲಿ ಹೆಚ್ಚಾಗಿ ರೋಗಗಳ ಜೊತೆಗೆ, ಪ್ರಾಣಿಗಳು ಮತ್ತು ಅಪಾಯಕಾರಿ ಹಾವುಗಳು ಮನೆಯೊಳಗೆ ಪ್ರವೇಶಿಸುವ ಅಪಾಯ ಹೆಚ್ಚಾಗುತ್ತದೆ. ಹಾಗೂ ಈ ಋತುವಿನಲ್ಲಿ ಹಾವುಗಳು ಹೆಚ್ಚಾಗಿ ಹೊರಬರುವುದಕ್ಕೆ ಕಾರಣ ಅವುಗಳ ಬಿಲಗಳಲ್ಲಿ ನೀರು ತುಂಬುವಂತದ್ದು. ಇನ್ನೂ ಕೆಲವು ಸಸ್ಯಗಳು ಮನೆಯಿಂದ ಹಾವುಗಳನ್ನು ದೂರವಿಡುವಲ್ಲಿ ಬಹಳ ಉಪಯುಕ್ತವಾಗಬಹುದು. ಈ ಸಸ್ಯಗಳ ಬಲವಾದ ವಾಸನೆಯು ಮನೆಗೆ ಹಾವುಗಳು ಬರದಂತೆ ಇವು ತಡೆಯುತ್ತವೆ ಎಂದಾಗಿದೆ.

ಸರ್ಪಗಂಧ ಸಸ್ಯ: ಸರ್ಪಗಂಧದ ವಾಸನೆಯು ತುಂಬಾ ವಿಚಿತ್ರವಾಗಿದ್ದು, ಹಾವುಗಳಿಗೆ ಆ ವಾಸನೆ ಇಷ್ಟವಾಗುವುದಿಲ್ಲ. ನೈಸರ್ಗಿಕ ಗುಣಗಳಿಂದ ತುಂಬಿರುವ ಈ ಸಸ್ಯದ ಬೇರುಗಳು ಹಳದಿ ಮತ್ತು ಕಂದು ಬಣ್ಣದಲ್ಲಿರುತ್ತವೆ.

ನಾಗದುನ ಸಸ್ಯ: ನಾಗದುನದ ವಾಸನೆಯನ್ನು ಹಾವುಗಳು ಸಹಿಸುವುದಿಲ್ಲ. ಮಳೆಗಾಲದಲ್ಲಿ ಹಾವುಗಳಂತಹ ಅಪಾಯಕಾರಿ ಜೀವಿಗಳನ್ನು ಮನೆಯಿಂದ ದೂರವಿಡಲು ಇದು ಸಹಕಾರಿಯಾಗಿದೆ.

ಚೆಂಡು ಹೂವು: ಹಳದಿ ಚೆಂಡು ಹೂವಿನ ಸಸ್ಯವು ಮನೆಯ ಸೌಂದರ್ಯವನ್ನು ಹೆಚ್ಚಿಸುವುದಲ್ಲದೆ ಹಾವುಗಳನ್ನು ದೂರವಿಡುತ್ತದೆ. ಈ ಹೂವಿನ ಬಲವಾದ ಪರಿಮಳವನ್ನು ಹಾವುಗಳು ಇಷ್ಟಪಡುವುದಿಲ್ಲ.

ಪಾಪಸ್‌ ಕಳ್ಳಿ: ಒಳಾಂಗಣ ಸಸ್ಯಗಳಲ್ಲಿ ಒಂದಾದ ಪಾಪಸ್‌ ಕಳ್ಳಿ, ಹಾವುಗಳನ್ನು ಓಡಿಸುವಲ್ಲಿ ಸಹಾಯಕವಾಗಿದ್ದು, ಈ ಸಸ್ಯವು ಮುಳ್ಳಿನಿಂದ ಕೂಡಿದ್ದು ಹಾವುಗಳು ಅಂತಹ ಸಸ್ಯಗಳ ಸುತ್ತಲೂ ಅಲೆದಾಡಲು ಇಷ್ಟಪಡುವುದಿಲ್ಲ.

Comments are closed.