CM Siddaramaiah: ಕಾಲ್ತುಳಿತ ಸಾವಿನ ಕುರಿತು ಮೊದಲೇ ಗೊತ್ತಿದ್ದರೇ ಕಾರ್ಯಕ್ರಮದ ವೇದಿಕೆ ಹತ್ತುತ್ತಿರಲಿಲ್ಲ: ಸಿಎಂ

Bangalore Stampede: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತ ದುರಂತದ ಕುರಿತು ಮುಖ್ಯಮಂತ್ರಿ ತೀವ್ರ ಬೇಸರ ವ್ಯಕ್ತಪಡಿಸಿದ್ದು, ಈ ಘಟನೆ ಕುರಿತು ಸ್ವಲ್ಪ ಮಾಹಿತಿ ಇದ್ದರೂ ವಿಧಾನಸೌಧದಲ್ಲಿ ಕಾರ್ಯಕ್ರಮ ಮಾಡುತ್ತಲೇ ಇರಲಿಲ್ಲ ಎಂದು ಹೇಳಿದ್ದಾರೆ.

ಈ ಕುರಿತು ಆಪ್ತಳ ಬಳಿ ಹೇಳಿ ತಮ್ಮ ಬೇಸರ ವ್ಯಕ್ತಪಡಿಸಿದ್ದಾರೆ ಸಿಎಂ ಎನ್ನಲಾಗಿದೆ. ಕಾಲ್ತುಳಿತ ಕುರಿತು ಅಧಿಕಾರಿಗಳು ತಡವಾಗಿ ಹೇಳಿದರು. ಸಾವಿನ ವಿಚಾರ ಗೊತ್ತಿದ್ದರೆ ವಿಧಾನಸೌಧದಲ್ಲಿ ಅಭಿನಂದನಾ ಸಮಾರಂಭ ಮಾಡುತ್ತಿರಲಿಲ್ಲ. ಕಾರ್ಯಕ್ರಮದ ಸ್ಟೇಜ್ ಕೂಡಾ ನಾನು ಹತ್ತುತ್ತಿರಲಿಲ್ಲ ಎಂದು ಹೇಳಿದ್ದಾರೆ.
Comments are closed.