ಚಿನ್ನಸ್ವಾಮಿ ಸಿಬ್ಬಂದಿಯಿಂದ ಅಭಿಮಾನಿಗಳ ಮೇಲೆ ಪೈಪ್‌ನಿಂದ ಹಲ್ಲೆ: ಕಾಲ್ತುಳಿತಕ್ಕೆ ಸಿಕ್ತು ಕಾರಣ!

Share the Article

Bengaluru: ಆರ್‌ಸಿಬಿ ವಿಜಯದ ಆಚರಣೆ ವೇಳೆ ಚಿನ್ನಸ್ವಾಮಿ ಸ್ಟೇಡಿಯಂನ ಬಳಿ ಸ್ಟೇಡಿಯಂ ಸಿಬ್ಬಂದಿಯಿಂದ ಅಭಿಮಾನಿಗಳ ಮೇಲೆ ಅಲ್ಲಿನ ಸಿಬ್ಬಂದಿಯಿಂದ ಪೈಪ್‌ನಿಂದ ಹಲ್ಲೆ ನಡೆದಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ ಎಂದು ಮಾಧ್ಯಮವೊಂದು ವರದಿಮಾಡಿದೆ. ಆ ಸಂಬಂಧಿ ವಿಶುವಲ್ ಈಗ ಲಭ್ಯ ಆಗ್ತಾ ಇವೆ.

ಈ ಭಯಾನಕ ಹಲ್ಲೆ ನಡೆದ ವೇಳೆ ಜನ ಅಲ್ಲಿಂದ ಪಾರಾಗಲು ಯತ್ನಿಸಿದ್ದು, ಆಗಲೇ ಕಾಲ್ತುಳಿತ ಸಂಭವಿಸಿದೆ. ಓರ್ವ ಆ ಸಂಬಂಧ ಬ್ಯಾರಿಕೇಡ್‌ಗೆ ಸಿಕ್ಕು ಬಿದ್ದು ನರಳುತ್ತಿರುವುದು ಸಹ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಎಲ್ಲಾ ದೃಶ್ಯಾವಳಿಗಳನ್ನು ಗಮನಿಸಿದರೆ ಸ್ಟೇಡಿಯಂ ಸಿಬ್ಬಂದಿಯ ನಿರ್ಲಕ್ಷ್ಯ ಎದ್ದು ತೋರುತ್ತಿದೆ.

ಕಾಲ್ತುಳಿತದ ಪ್ರಕರಣಕ್ಕೆ ಈಗ ನಾಲ್ವರನ್ನು ಬಂಧಿಸಿದ್ದು, ಆರೋಪಿಗಳಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಅಲ್ಲದೆ ಕೊಹ್ಲಿ ವಿರುದ್ಧವೂ ಪ್ರಕರಣ ದಾಖಲಾಗಿದೆ. ಬೆಂಗಳೂರು ಪೊಲೀಸ್‌ ಕಮಿಷನರ್‌ ಸೇರಿ 5 ಪೊಲೀಸ್‌ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. ಇನ್ನು ಸಿಎಂ ರಾಜಕೀಯ ಕಾರ್ಯದರ್ಶಿ ಗೋವಿಂದರಾಜ್‌ ರವರು ನಿಖಿಲ್ ಸೋಸಲೆಯನ್ನು ಬಿಟ್ಟು ಕಳಿಸುವಂತೆ ಪೊಲೀಸರಿಗೆ ಒತ್ತಡ ಹಾಕಿದ್ದರು ಎನ್ನಲಾಗಿದೆ. ಇದಕ್ಕಾಗಿ ಗೋವಿಂದರಾಜ್‌ ರನ್ನು ತಮ್ಮ‌ ರಾಜಕೀಯ ಕಾರ್ಯದರ್ಶಿ ಸ್ಥಾನದಿಂದ ಕಿತ್ತು ಹಾಕಲಾಗಿದೆ ಎನ್ನಲಾಗುತ್ತಿದೆ.

Comments are closed.