Belthangady: ಬೆಳ್ತಂಗಡಿ: ಮನೆಯೊಂದರ ಮೇಲೆ ಅಬಕಾರಿ ದಾಳಿ: ಗಾಂಜಾ ವಶ!

Share the Article

Belthangady:ಅಬಕಾರಿ ಉಪ ಅಧೀಕ್ಷಕ ಸಂತೋಷ ಮೋಡಗಿ ನೇತೃತ್ವದಲ್ಲಿ ಬೆಳ್ತಂಗಡಿ (Belthangady) ಮದ್ದಡ್ಕ ಬಳಿಯ ಮನೆಯೊಂದರ ಮೇಲೆ ಜೂ. 3ರಂದು ರಾತ್ರಿ 8 ಗಂಟೆಗೆ ದಾಳಿ ಮಾಡಿದ ಅಬಕಾರಿ ದಳ 2 ಪ್ಲಾಸ್ಟಿಕ್ ಡಬ್ಬದಲ್ಲಿದ್ದ 250 ಗ್ರಾಂ ಗಾಂಜಾ ಹಾಗೂ 2 ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದೆ.

ದಾಳಿ ವೇಳೆ ಆರೋಪಿ ಮಹಮ್ಮದ್ ರಫೀಕ್ ಪರಾರಿಯಾಗಿದ್ದು ಆರೋಪಿಯ ವಿರುದ್ಧ ಎನ್‌ಡಿಪಿಎಸ್ ಕಾಯ್ದೆ 1985ರ ಕಲಂ 8ಸಿ, 20(2)ಎ ಹಾಗೂ 25ರನ್ವಯ ಪ್ರಕರಣ ದಾಖಲಿಸಿ ಬೆಳ್ತಂಗಡಿ ನ್ಯಾಯಾಲಯಕ್ಕೆ 4ರಂದು ವರದಿ ಸಲ್ಲಿಸಲಾಗಿದೆ.

Comments are closed.