KSCA: ಕಾಲ್ತುಳಿತ ಬೆನ್ನಲ್ಲೇ KSCA ಗೆ ಮತ್ತೊಂದು ಶಾಕ್!: ದಂಡ ಸಮೇತವಾಗಿ 10 ಕೋಟಿ ತೆರಿಗೆ ಪಾವತಿಸುವಂತೆ ಬಿಬಿಎಂಪಿ ಸೂಚನೆ

KSCA: ಚಿನ್ನಸ್ವಾಮಿ ಕ್ರೀಡಾಂಗಣದ ದುರಂತದಲ್ಲಿ 11 ಜನರು ಮೃತಪಟ್ಟಿದ್ದು, ಹಲವರ ರಾಜೀನಾಮೆ, ಅಮಾನತುಗಳು ನಡೆಯುತ್ತಿರುವಾಗಲೇ ಬಿಬಿಎಂಪಿ KSCA ಮೇಲೆ ದಂಡ ವಿಧಿಸಲು ಮುಂದಾಗಿದೆ.

ಈ ಹಿಂದೆಯೇ 10 ಕೋಟಿ ಜಾಹಿರಾತು ತೆರಿಗೆ ಬಾಕಿ ಉಳಿಸಿಕೊಂಡಿದ್ದ, KSCA ಗೆ ಬಿಬಿಎಂಪಿ ನೋಟಿಸ್ ನೀಡಿದ್ದರೂ ಕೂಡ ಪಾವತಿಸದ ಕಾರಣ ಇದೀಗ ದಾಂಡಾ ವಸೂಲು ಮಾಡಲು ಬಿಬಿಎಂಪಿ ತಯಾರಾಗಿ ನಿಂತಿದ್ದು, ಪಾವತಿ ಮಾಡದಿದ್ದಲ್ಲಿ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದಿದೆ.
ಈಗಾಗಲೇ KSCA ಸೆಕ್ರೆಟರಿ ಸ್ಥಾನಕ್ಕೆ ಶಂಕರ್ ಹಾಗೂ ಖಜಾಂಚಿ ಸ್ಥಾನಕ್ಕೆ ಜೈ ರಾಮ್ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದ್ದು, ಇದೀಗ KSCA ಮತ್ತೊಂದು ಸಂಕಷ್ಟಕ್ಕೆ ಸಿಲುಕಿದೆ.
Comments are closed.