Shine Tom Chacko: ಅಪಘಾತದಲ್ಲಿ ನಟ ಶೈನ್ ತಂದೆ ನಿಧನ : ಸೋಮವಾರ ಅಂತ್ಯಕ್ರಿಯೆ, ಕೇಂದ್ರ ಸಚಿವ ಸುರೇಶ್ ಗೋಪಿ ಹೇಳಿದ್ದೇನು?

Shine Tom Chacko: ನಿನ್ನೆ ನಡೆದ ರಸ್ತೆ ಅಪಘಾತದಲ್ಲಿ ಮಲಯಾಳಂ ಚಿತ್ರರಂಗದ ಖ್ಯಾತ ನಟ ಶೈನ್ ಟಾನ್ ಚಾಕೋ ಅವರನ್ನು ಕೇಂದ್ರ ಸಚಿವ ಸುರೇಶ್ ಗೋಪಿ ಭೇಟಿ ನೀಡಿದ್ದಾರೆ. ಶೈನ್ ಅವರಿಗೆ ಗಂಭೀರ ಗಾಯವಾಗಿಲ್ಲ ಎಂದು ಹೇಳಿದ್ದಾರೆ. ಚಿಕ್ಕ ಶಸ್ತ್ರಚಿಕಿತ್ಸೆಯ ಅಗತ್ಯವಿದೆ ಎಂದು ಹೇಳಿದ್ದಾರೆ.

ನಟನ ತಾಯಿ ಮಾರಿಯಾ ಅವರನ್ನು ನಿನ್ನೆ ತ್ರಿಶೂರ್ ಸನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಶೈನ್ ಅವರ ಎಡಗೈ ಮುರಿದಿದೆ. ಶೈನ್ ಅವರ ತಂದೆ ಸಿ.ಪಿ.ಚಾಕೋ ಮೃತಪಟ್ಟಿದ್ದಾರೆ. ಇವರ ಪಾರ್ಥೀವ ಶರೀರವನ್ನು ಶುಕ್ರವಾರ ರಾತ್ರಿ ಊರಿಗೆ ತರಲಾಯಿತು. ಸೋಮವಾರ ಬೆಳಿಗ್ಗೆ 10.30ಕ್ಕೆ ತ್ರಿಶೂರ್ ಮುಂಡೂರ್ ಕರ್ಮೆಲ್ ಮಾತಾ ಚರ್ಚ್ನಲ್ಲಿ ಅಂತ್ಯಕ್ರಿಯೆ ನಡೆಯಲಿದೆ.
ವಿದೇಶದಲ್ಲಿರುವ ಹೆಣ್ಣು ಮಕ್ಕಳು ಬಂದ ನಂತರ ಅಂತ್ಯಕ್ರಿಯೆ ನಡೆಯಲಿದೆ ಎಂದು ಹೇಳಲಾಗಿದೆ. ಧರ್ಮಪುರಿ ಬಳಿ ನಲ್ಲಂಪಳ್ಳಿಯಲ್ಲಿ ನಿನ್ನೆ ಬೆಳಿಗ್ಗೆ ಈ ಅಪಘಾತ ಸಂಭವಿಸಿತ್ತು. ಶೈನ್ ಟಾಮ್ ಚಾಕೋ ಮತ್ತು ಅವರ ತಾಯಿ, ಸಹೋದರ, ತಂದೆ, ಸಹಾಯಕ ಕಾರಿನಲ್ಲಿದ್ದು, ಬೆಂಗಳೂರಿಗೆ ಶೈನ್ ಅವರ ಚಿಕಿತ್ಸೆಗೆಂದು ಹೋಗುತ್ತಿದ್ದ ಸಂದರ್ಭದಲ್ಲಿ ಈ ದುರಂತ ಅವಘಡ ನಡೆದಿದೆ.
Comments are closed.