Ayodhya: ಅಯೋಧ್ಯೆ ರಾಮನಿಗೆ 11 ಕಿರೀಟ, ಚಿನ್ನದ ಬಿಲ್ಲು -ಬಾಣ ಸೇರಿ ಭಾರೀ 30ಕೆಜಿ ಬೆಳ್ಳಿ ಅರ್ಪಿಸಿದ ವಜ್ರ ವ್ಯಾಪಾರಿ !!

Share the Article

Ayodhya: ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ಗೆ ಗುಜರಾತ್ ಮೂಲದ ವಜ್ರ ವ್ಯಾಪಾರಿ 11 ಕಿರೀಟಗಳು ಮತ್ತು ಚಿನ್ನದ ಬಿಲ್ಲು ಮತ್ತು ಬಾಣ ಸೇರಿದಂತೆ ದುಬಾರಿ ಆಭರಣಗಳ ಸಂಗ್ರಹವನ್ನು ದಾನ ಮಾಡಿದ್ದಾರೆ.

ಹೌದು, ಗುಜರಾತ್‌ನ ವಜ್ರ ವ್ಯಾಪಾರಿಯೊಬ್ಬರು ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ಗೆ 11 ವಜ್ರಖಚಿತ ಕಿರೀಟಗಳು, ಚಿನ್ನದ ಬಿಲ್ಲು, ಬಾಣ ಸೇರಿದಂತೆ ಹಲವಾರು ಅಮೂಲ್ಯ ಆಭರಣಗಳನ್ನು ದೇಣಿಗೆ ನೀಡಿದ್ದಾರೆ ಎಂದು ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ತಿಳಿಸಿದೆ.

ವಜ್ರ ವ್ಯಾಪಾರಿ ಮುಖೇಶ್ ಪಟೇಲ್ 11 ವಜ್ರಖಚಿತ ಕಿರೀಟಗಳು, 30 ಕಿಲೋಗ್ರಾಂಗಳಷ್ಟು ಬೆಳ್ಳಿ, 300 ಗ್ರಾಂ ಚಿನ್ನ ಮತ್ತು ಮಾಣಿಕ್ಯಗಳನ್ನು ದಾನ ಮಾಡಿದರು. ಈ ವಸ್ತುಗಳನ್ನು ವಿಶೇಷ ಚಾರ್ಟರ್ಡ್ ವಿಮಾನದಲ್ಲಿ ಅಯೋಧ್ಯೆಗೆ ಸಾಗಿಸಲಾಯಿತು ಎಂದು ನ್ಯೂವಾಡಿಯಾ ತಿಳಿಸಿದ್ದಾರೆ.

ಏನೆಲ್ಲಾ ಆಭರಣಗಳಿವೆ?

11 ವಜ್ರಖಚಿತ ಕಿರೀಟಗಳು, 30 ಕೆ.ಜಿ. ಬೆಳ್ಳಿ , 300ಗ್ರಾಂ ಚಿನ್ನ ಮತ್ತು ಮಾಣಿಕ್ಯ(rubies)ಗಳನ್ನು ದೇಣಿಗೆ ನೀಡಿದ್ದಾರೆ. ಇವುಗಳ ಜತೆಗೆ, ಹಾರಗಳು, ಕಿವಿಯೋಲೆಗಳು, ಹಣೆಯ ತಿಲಕ, ರಾಮಾಯಣದ ನಾಲ್ವರು ಸಹೋದರರನ್ನು(ರಾಮ, ಲಕ್ಷ್ಮಣ, ಭರತ, ಶತ್ರುಘ್ನ)ಪ್ರತಿನಿಧಿಸುವ ನಾಲ್ಕು ದೊಡ್ಡ ಮತ್ತು ಮೂರು ಸಣ್ಣ ಬಿಲ್ಲುಗಳು, ನಾಲ್ಕು ಬತ್ತಳಿಕೆಗಳು, ಮೂರು ಗದೆಗಳು ಮತ್ತು ರೇಶ್ಮೆಯಿಂದ ಮಾಡಿದ ಬೀಸಣಿಕೆಯನ್ನು ನೀಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಪ್ರಸಿದ್ಧ ಉದ್ಯಮಿಯಾಗಿರುವ ಪಟೇಲ್, ಸೂರತ್‌ನಲ್ಲಿ ಗ್ರೀನ್ ಲ್ಯಾಬ್ ಎಂಬ ಆಭರಣ ಸಂಸ್ಥೆಯ ಮಾಲೀಕರಾಗಿದ್ದಾರೆ. ಅವರು ತಮ್ಮ ಧಾರ್ಮಿಕ ದೇಣಿಗೆ ದಾನಗಳಿಗೆ ಹೆಸರುವಾಸಿಯಾಗಿದ್ದಾರೆ.

Comments are closed.