Bengaluru : ಚಿನ್ನಸ್ವಾಮಿಯಲ್ಲಿ RCB ವಿಜಯೋತ್ಸವಕ್ಕೆ 15ಕೋಟಿ ಖರ್ಚು?!

Bengaluru: ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಕಾಲ್ತುಡಿತ ಸಾವಿನ ದುರಂತ ನಡೆದುದಕ್ಕಾಗಿ ಜನರು ಸರ್ಕಾರವನ್ನು ಜಾಡಿಸುತ್ತಿದ್ದಾರೆ. ಸರ್ಕಾರದ ವಿರುದ್ಧ ಒಂದರ ಹಿಂದೆ ಒಂದು ಕೇಸ್ಗಳು ದಾಖಲಾಗುತ್ತಿವೆ. ಈ ಬೆನ್ನಲ್ಲೇ ಈ ವಿಜಯೋತ್ಸವಕ್ಕೆ ಸರ್ಕಾರ 15 ಕೋಟಿ ಖರ್ಚು ಮಾಡಿದೆ ಎಂಬ ಸುದ್ದಿ ಹೊರ ಬಿದ್ದಿದೆ.

ಹೌದು, ಆರ್‌ಸಿಬಿ ‘ವಿಜಯೋತ್ಸವ’ ಕಾರ್ಯಕ್ರಮಕ್ಕಾಗಿ (ವಿಧಾನಸೌಧ ಮತ್ತು ಚಿನ್ನಸ್ವಾಮಿ ಕ್ರೀಡಾಂಗಣ) ಸುಮಾರು ₹15 ಕೋಟಿಗೂ ಹೆಚ್ಚು ಖರ್ಚಾಗಿರುವುದಾಗಿ ಗೊತ್ತಾಗಿದೆ.
ಅಂದಹಾಗೆ ಐಪಿಎಲ್‌ನ ಇವೆಂಟ್ ಮ್ಯಾನೇಜ್‌ಮೆಂಟ್ ಜವಾಬ್ದಾರಿ ಹೊತ್ತಿರುವ ಡಿಎನ್‌ಎ ಎಂಟರ್‌ಟೈನ್‌ಮೆಂಟ್ ನೆಟ್‌ವರ್ಕ್ಸ್ ಪ್ರೈವೆಟ್ ಲಿಮಿಟೆಡ್ ಸಂಸ್ಥೆಯೇ ವಿಜಯೋತ್ಸವ ಕಾರ್ಯಕ್ರಮದ ಜವಾಬ್ದಾರಿ ವಹಿಸಿಕೊಂಡಿತ್ತು. ಈ ಕಂಪನಿ ರಾಜ್ಯದ ಮಾಜಿ ಮುಖ್ಯಮಂತ್ರಿಯೊಬ್ಬರ ಮೊಮ್ಮಕ್ಕಳಿಗೆ ಸೇರಿದ್ದು, ಸರ್ಕಾರದಲ್ಲಿ ಪ್ರಭಾವ ಹೊಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.
Comments are closed.