V Somanna: 11 ಅಮಾಯಕ ಜೀವಗಳ ಬಲಿ: ಸರಕಾರ ಪಾಪಕ್ಕೆ ಗುರಿಯಾಗಿದೆ- ವಿ ಸೋಮಣ್ಣ

V Somanna: 11 ಅಮಾಯಕ ಜೀವಗಳನ್ನು ಬಲಿ ತೆಗೆದುಕೊಂಡು ಸರಕಾರ ಪಾಪಕ್ಕೆ ಗುರಿಯಾಗಿದೆ ಎಂದು ಕೇಂದ್ರ ಸಚಿವ ವಿ ಸೋಮಣ್ಣ ವಾಗ್ದಾಳಿ ಮಾಡಿದ್ದಾರೆ.

ಇಂದು ಈ ಕುರಿತು ಚಿನ್ನಸ್ವಾಮಿ ಕಾಲ್ತುಳಿತ ಪ್ರಕರಣದ ಕುರಿತು ಹೇಳಿದ್ದಾರೆ. ಇದೊಂದು ಲಜ್ಜೆಗೇಡಿ ಸರಕಾರ. ಹೆಸರು ಬರುತ್ತೆ ಎಂದು ತರಾತುರಿಯಲ್ಲಿ ಕಾರ್ಯಕ್ರಮ ಮಾಡಿದರು. ಒಂದು ವಾರ ಬಿಟ್ಟು ಮಾಡಿದರೆ ಏನು ಆಗುತ್ತಿತ್ತು. ಇಂತಹ ಕೆಲಸ ಮಾಡಿ ನೀವು ಪಾಪಕ್ಕೆ ಗುರಿಯಾಗಿದ್ದೀರಾ ಎಂದು ಹೇಳಿದರು.
ಪೊಲೀಸ್ ಕಮೀಷನರ್ ದಯಾನಂದ್ ಪ್ರಾಮಾಣಿಕ ಅಧಿಕಾರಿ. ಅವರನ್ನು ಅಮಾನತು ಮಾಡ್ತೀರಾ. ಸಿದ್ದರಾಮಯ್ಯ ನೈತಿಕತೆ ಇದ್ದರೆ ರಾಜೀನಾಮೆ ಕೊಡಬೇಕಿತ್ತು. ಸಿದ್ದರಾಮಯ್ಯ ಅವರೇ ಯಾರು ನಿಮ್ಮ ಕಿವಿ ಕಚ್ಚಿದ್ರು ಇವತ್ತು ಮಾಡಿ ಅಂತ. ನಿಮ್ಮ ಅನುಭವ, ಚಿಂತನೆ ಏನಾಯ್ತು? ಮುಗ್ಧರನ್ನ ಸಾಯಿಸಿ ಶಾಪಗ್ರಸ್ತ ಸರ್ಕಾರ ಆಗಿದೆ ಈ ಸರ್ಕಾರ ಎಂದು ಹರಿಹಾಯ್ದರು.
Comments are closed.