Arun Yogiraj: ರಾಮ ಮಂದಿರದಲ್ಲಿರೋ ಬಾಲರಾಮನ ವಿಗ್ರಹ ಎರಡನೆಯದ್ದು- ಹಾಗಿದ್ರೆ ಅರುಣ್ ಯೋಗಿರಾಜ್ ಕೆತ್ತಿದ ವಿಗ್ರಹ ಏನಾಯ್ತು?

Arun Yogiraj: ಅಯೋಧ್ಯೆಯಲ್ಲಿ ರಾಮಮಂದಿರದಲ್ಲಿ ಅತ್ಯಂತ ಸುಂದರ ಬಾಲರಾಮನ ವಿಗ್ರಹ ಪ್ರತಿಷ್ಠಾಪನೆ ಆಗಿ ವರ್ಷಗಳು. ಈ ಸುಂದರಮೂರ್ತಿಗೆ ದೇಶದ ಜನ ಮಾರುಹೋಗಿದ್ದಾರೆ. ಈ ವಿಗ್ರಹವನ್ನು ಕೆತ್ತಿದ್ದು ನಮ್ಮ ಕರ್ನಾಟಕದ ಶಿಲ್ಪಿಗಳಾದ ಅರುಣ್ ಯೋಗಿರಾಜ್ ಎಂಬುದು ಎಲ್ಲರಿಗೂ ತಿಳಿದಿದೆ. ಅವರ ಕೈಚಳಕದ ಬಗ್ಗೆ ಒಂದೆರಡು ಮಾತುಗಳಿಲ್ಲ. ಆದರೆ ಇದೀಗ ಈ ವಿಗ್ರಹದ ಕುರಿತು ಅಚ್ಚರಿಯ ಮಾಹಿತಿ ಒಂದು ರಿವಿಲ್ ಆಗಿದೆ.
ಹೌದು, ಅಯೋಧ್ಯೆಯ ರಾಮಮಂದಿರದಲ್ಲಿ ಸ್ಥಾಪನೆಯಾಗಿರುವ ಬಾಲರಾಮನ ವಿಗ್ರಹ ಎರಡನೆಯ ವಿಗ್ರಹ ಎಂದು ತಿಳಿದುಬಂದಿದೆ. ಅಂದರೆ ಇದಕ್ಕೂ ಮೊದಲು ಅರುಣ್ ಯೋಗಿರಾಜ್ ಅವರು ಇನ್ನೊಂದು ಬಾಲ ರಾಮನ ವಿಗ್ರಹವನ್ನು ಕೆತ್ತಿದ್ದರು. ಅದರ ಕೆತ್ತನೆ ಕಾರ್ಯವು ಕೂಡ ಮುಗಿಯುತ್ತ ಬಂದಿತ್ತು. ಆದರೆ ಕೊನೆ ಕ್ಷಣದಲ್ಲಿ ಆ ವಿಗ್ರಹವನ್ನು ರಿಜೆಕ್ಟ್ ಮಾಡಲಾಗುತ್ತದೆ. ಬಳಿಕ ಕೆಲವೇ ಸಮಯದಲ್ಲಿ ಅರುಣ್ ರಾಜ್ ಅವರು ಇದೀಗ ಮಂದಿರದಲ್ಲಿ ಸ್ಥಾಪನೆಗೊಂಡಿರುವ ಸುಂದರಮೂರ್ತಿಯನ್ನು ಕೆತ್ತನೆ ಮಾಡಿಕೊಡುತ್ತಾರೆ. ಇದೀಗ ಈ ವಿಚಾರವನ್ನೇ ಅರುಣ್ ಯೋಗಿರಾಜ್ ಅವರು ರಿವಿಲ್ ಮಾಡಿದ್ದಾರೆ.
ಯಸ್, ಖಾಸಗಿ ಮಾಧ್ಯಮಕ್ಕೆ ಸಂದರ್ಶನ ನೀಡಿದ ಅರುಣ್ ಯೋಗಿರಾಜ್ ಅವರು ಇದೀಗ ಮಂದಿರದಲ್ಲಿ ಸ್ಥಾಪನೆಗೊಂಡಿರುವುದು ನಾನು ಕೆತ್ತಿದ ಎರಡನೇ ವಿಗ್ರಹ. ಮೊದಲು ಕೆತ್ತಿದ ವಿಗ್ರಹವನ್ನು ರಿಜೆಕ್ಟ್ ಮಾಡಲಾಯಿತು ಎಂದಿದ್ದಾರೆ. ಬಳಿಕ ಮಾತನಾಡಿದ ಅವರು ಮೊದಲ ವಿಗ್ರಹದ 65 ಪರ್ಸೆಂಟ್ ಕೆಲಸ ಪೂರ್ಣಗೊಂಡಿತ್ತು. ಒಂದು ಸಲ ಇದ್ದಕ್ಕಿದ್ದಂತೆ ದೆಹಲಿಗೆ ಕರೆಸಿ ಈ ವಿಗ್ರಹದ ಕೆಲವು ನೆಗೆಟಿವ್ ಅಂಶಗಳು ಪತ್ತೆಯಾಗಿವೆ. ಹೀಗಾಗಿ ನೀವು ಈ ವಿಗ್ರಹವನ್ನು ಇಲ್ಲಿಗೆ ನಿಲ್ಲಿಸಿ, ಹೊಸತೊಂದು ಶಿಲೆಯಲ್ಲಿ ವಿಗ್ರಹವನ್ನು ಕೆತ್ತಿ ಕೊಡಬಹುದೇ? ಇದಕ್ಕಾಗಿ ನಿಮಗೆ ಎರಡುವರೆ ತಿಂಗಳು ಸಮವಯ ನೀಡುತ್ತೇವೆ ಎಂದು ಕೇಳಿದರು. ನಾನು ಸಂತೋಷದಿಂದ ಒಪ್ಪಿಕೊಂಡು ಮೊದಲಿನ ವಿಗ್ರಹಕ್ಕಿಂತಲೂ ಸುಂದರವಾಗಿ ಮತ್ತೊಂದು ವಿಗ್ರಹವನ್ನು ಕೆತ್ತಿ ಕೊಡುತ್ತೇನೆ ಎಂದು ಹೇಳಿದೆ. ಅದರ ಫಲವಾಗಿಯೇ ಈ ಸುಂದರ ಮೂರ್ತಿ ಕೆತ್ತನೆಯಾಗಿದೆ ಎಂದು ಅವರು ತಿಳಿಸಿದ್ದಾರೆ.
https://www.instagram.com/reel/DHswP8rCeds/?igsh=dGxzenFua2kwNWc5
Comments are closed.