Prahalad Joshi: ಹೈಕಮಾಂಡ್‌ನಲ್ಲಿ ಕಮಾಂಡ್ ಇದ್ದರೆ ಮೊದಲು ಡಿಸಿಎಂ ಮೇಲೆ ಕ್ರಮ ತಗೊಳ್ಳಿ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

Prahalad Joshi: ಬೆಂಗಳೂರು ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಮತನಾಡಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಈ ದುರಂತಕ್ಕೆ ರಾಜ್ಯ ಸರ್ಕಾರವೇ ನೇರ ಹೊಣೆ ಎಂದಿದ್ದಾರೆ.
ಬೆಂಗಳೂರು ಪೊಲೀಸ್ ಕಮಿಷನರ್ ತಮ್ಮ ನಿರಾಕರಣೆಯನ್ನು ಬರವಣಿಗೆಯಲ್ಲಿ ಬರೆದುಕೊಟ್ಟಿಲ್ಲ ಎಂಬ ಕಾರಣಕ್ಕೆ ಅವರನ್ನು ಅಮಾನತುಗೊಳಿಸಿದ್ದು, ತಾವುಗಳು ಟ್ವಿಟರ್ ಮೂಲಕ ಅಭಿಮಾನಿಗಳಿಗೆ ಕರೆ ಕೊಟ್ಟಿಲ್ಲವೇ ಎಂದು ಜೋಶಿ ಪ್ರಶ್ನಿಸಿದ್ದಾರೆ.
RCB ತಂಡ ಗೆದ್ದ ಮರುದಿನವೇ ಅವರು ವಿಜಯೋತ್ಸವಕ್ಕೆ ಬರಲು ತಯಾರಿರಲಿಲ್ಲ ಎಂದು ಹೇಳಿದ ಅವರು, ಸಿ ಎಂ ಇದುವರೆಗೂ ಜನರಲ್ಲಿ ಕ್ಷಮೆ ಕೇಳಿಲ್ಲ, ಇಷ್ಟೊಂದು ತರಾತುರಿಯಲ್ಲಿ ಯೋಜನೆಯಿಲ್ಲದೆ ಕಾರ್ಯಕ್ರಮ ಮಾಡುವ ಅವಶ್ಯಕತೆ ಇರಲಿಲ್ಲ. ಸಮಯ ತೆಗೆದುಕೊಳ್ಳಬಹುದಾಗಿತ್ತು ಎಂದು ಜೋಶಿ ಕಿಡಿಕಾರಿದ್ದಾರೆ.
ರಾಹುಲ್ ಗಾಂಧಿ ಎಲ್ಲಾ ಕಡೆ ಹೋಗಿ ಮಾತನಾಡುತ್ತಾರೆ, ಈಗ ಅವರ ಬುದ್ಧಿ ಎಲ್ಲಿ ಹೋಗಿದೆ ಹಾಗೂ ಹೈ ಕಮಾಂಡ್ ನಲ್ಲಿ ಕಮಾಂಡ್ ಇದ್ದರೆ ಡಿಸಿಎಂ ಹಾಗೂ ಸಿಎಂ ಸ್ಥಾನದಲ್ಲಿರುವವರನ್ನು ಅಮಾನತು ಮಾಡಿ ಎಂದು ಪ್ರಹ್ಲಾದ್ ಜೋಷಿ ಹೇಳಿದ್ದಾರೆ.
Comments are closed.