Bengaluru Stampede: ಹೈಕೋರ್ಟ್ ಸುಮೋಟೋ ಕೇಸ್ ದಾಖಲು ಹಿನ್ನೆಲೆ – ಸಿಎಸ್ ಶಾಲಿನಿ ರಜನೀಶ್ ಹಾಗೂ ಡಿಜಿಪಿ ಸಲೀಂ ಭೇಟಿ

Share the Article

Bengaluru Stampede: ವಿಧಾನಸೌಧದಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರನ್ನು ಡಿಜಿಪಿ ಸಲೀಂ ಭೇಟಿಯಾದರು. ಹೈಕೋರ್ಟ್ ಸುಮೋಟೋ ಕೇಸ್ ದಾಖಲಿಸಿಕೊಂಡ ಹಿನ್ನೆಲೆ, ಪ್ರಕರಣವನ್ನ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಭೇಟಿ ವೇಳೆ ಕೋರ್ಟ್‌ಗೆ ಮಾಹಿತಿ ನೀಡುವ ಬಗ್ಗೆ ಚರ್ಚೆ ನಡೆಸಲಾಯ್ತು.

ಘಟನೆಗೆ ವೈಫಲ್ಯಗಳೇನು? ಯಾವ ಹಂತದಲ್ಲಿ ಕಾಲ್ತುಳಿತ ಆಯ್ತು. ಅಭಿಮಾನಿಗಳ ಕ್ರೌಡ್ ಕಂಟ್ರೋಲ್ ಮಾಡುವಲ್ಲಿ ಪೊಲೀಸರು ವಿಫಲರಾದರೇ? ಈ ಬಗ್ಗೆ ಈಗಾಗಲೇ ಐವರು ಪೊಲೀಸ್ ಅಧಿಕಾರಿಗಳ ಮೇಲೆ ಕ್ರಮ ಆಗಿದೆ. ಬೆಂಗಳೂರು ಪೊಲೀಸ್ ಆಯುಕ್ತರೂ ಸೇರಿದಂತೆ ಐವರ ಅಮಾನತ್ತು ಮಾಡಿ ಕ್ರಮ ಜರಗಿಸಲಾಗಿದೆ.

ಅಲ್ಲದೆ ಗಾಯಾಳುಗಳ ಚಿಕಿತ್ಸಾ ವೆಚ್ಚ ಸರ್ಕಾರವೇ ಬರಿಸಿದೆ. ಮೃತ 11 ಜನರ ಕುಟುಂಬಗಳಿಗೆ 10 ಲಕ್ಷ ಪರಿಹಾರ ಘೋಷಣೆ ಮಾಡಲಾಗಿದೆ. ಘಟನೆ ಬಳಿಕ ಅಗತ್ಯ ಕ್ರಮಗಳನ್ನ ತೆಗೆದುಕೊಳ್ಳಲಾಗಿದೆ ಅಂತ ಕೋರ್ಟಿಗೆ ಮಾಹಿತಿ ನೀಡಲು ತಯಾರಿ ನಡೆಸಲಾಗುತ್ತಿದೆ. ಈ ಬಗ್ಗೆ ಸಿಎಂ ಜೊತೆಯಲ್ಲಿ ಕೂಡ ಸಿಎಸ್ ಹಾಗೂ ಡಿಜಿಪಿ ಚರ್ಚೆ ಮಾಡಿದರು.

Comments are closed.