Namma Metro: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್‌ಸಿಬಿ ಸೆಲೆಬ್ರೇಶನ್ ಎಫೆಕ್ಟ್ – ಮೆಟ್ರೋದಲ್ಲಿ 9 ಲಕ್ಷಕ್ಕೂ ಹೆಚ್ಚು ಜನ ಪ್ರಯಾಣ – ಐತಿಹಾಸಿಕ ದಾಖಲೆ

Share the Article

Namma Metro: ಬರೋಬ್ಬರಿ 17 ವರ್ಷಗಳ ಕಾತುರ, ನಿರೀಕ್ಷೆ, ಪರಿಶ್ರಮದ ನಂತರ ಬೆಂಗಳೂರಿನ ಆರ್‌ಸಿಬಿ ತಂಡಕ್ಕೆ ಐಪಿಎಲ್‌ ಕಪ್‌ ದೊರಕಿತು. ಈ ಸಂತಸದ ಕ್ಷಣವನ್ನು ಸಂಭ್ರಮಾಚರಣೆ ಮಾಡಲು ನಿನ್ನೆ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕರ್ನಾಟಕ ಕ್ರಿಕೆಟ್‌ ಮಂಡಳಿ ಹಾಗೂ ರಾಜ್ಯ ಸರ್ಕಾರ ಜಂಟಿಯಾಗಿ ಕಾರ್ಯಕ್ರಮ ಆಯೋಜಿಸಿತ್ತು. ಆದರೆ ಕಾರ್ಯಕ್ರಮ ನಡೆಯಬೇಕಾಗಿದ್ದ ಚಿನ್ನಸ್ವಾಮಿ ಕ್ರೀಡಾಂಗಣ ಮಸನವಾಗಿ ಪರಿಣಮಿಸಿತ್ತು. 30 ಸಾವಿರ ಸಾಮರ್ಥ್ಯದ ಕ್ರೀಡಾಂಗಣಕ್ಕೆ 3 ಲಕ್ಷಕ್ಕೂ ಅಧಿಕ ಮಂದಿ ಆಗಮಿಸಿದ್ದರು. ಇವರೆಲ್ಲಾ ಆಗಮಿಸಿದ್ದು ನಮ್ಮ ಮೆಟ್ರೋ ಮೂಲಕ.

ನಿನ್ನೆ ಆರ್‌ಸಿಬಿ ಸೆಲೆಬ್ರೇಶನ್ ಎಫೆಕ್ಟ್‌ನಿಂದ ನಿನ್ನೆ ಒಂದೇ ದಿನ ಮೆಟ್ರೋದಲ್ಲಿ 9 ಲಕ್ಷಕ್ಕೂ ಹೆಚ್ಚು ಜನ ಪ್ರಯಾಣ ಬೆಳೆಸಿದ್ದಾರೆ. ಆದರೆ ಪ್ರಯಾಣಿಕರನ್ನ ಕಂಟ್ರೋಲ್ ಮಾಡಲು ಮೆಟ್ರೋ ಸಿಬ್ಬಂದಿ ಹರಸಾಹಸ ಪಟ್ಟಿದ್ದರು. ಪ್ರತೀ ದಿನ ಓಡಾಡುವ ಮೆಟ್ರೋ ಪ್ರಯಾಣಿಕರ ಸಂಖ್ಯೆಯಲ್ಲಿ ಸುಮಾರು ಮೂರು ಪಟ್ಟು ಹೆಚ್ಚಳವಾಗಿತ್ತು.

ಮೆಟ್ರೋ ಮಾರ್ಗ 1 ರಲ್ಲಿ 4,78,334 ಪ್ರಯಾಣಿಕರು ಪ್ರಯಾಣಿಸಿದ್ರೆ, ಮೆಟ್ರೋ ಮಾರ್ಗ 2 ರಲ್ಲಿ 2,84,674 ಪ್ರಯಾಣಿಕರು ಪ್ರಯಾಣ ಮಾಡಿದ್ದರು. ಕೆಂಪೇಗೌಡ (ಕೆಜಿಡಬ್ಲ್ಯೂಎ) ದಲ್ಲಿನ ಇಂಟರ್‌ಚೇಂಜ್‌ನಲ್ಲಿ 2,03,724 ಪ್ರಯಾಣಿಕರು ಪ್ರಯಾಣಿಸಿದ್ದು, ಆದ್ರಲ್ಲೂ ಕಬ್ಬನ್ ಪಾರ್ಕ್, ವಿಧಾನಸೌಧ, ಎಂಜಿ ರಸ್ತೆ ಮತ್ತು ಸರ್ ಎಂ. ವಿಶ್ವೇಶ್ವರಯ್ಯ ಸೇರಿದಂತೆ ಸೆಂಟ್ರಲ್ ಬ್ಯುಸಿನೆಸ್ ಡಿಸ್ಟ್ರಿಕ್ಟ್ (ಸಿಬಿಡಿ) ನಿಲ್ದಾಣಗಳಲ್ಲಿನ ಅಪಾರ ಪ್ರಯಾಣಿಕರು ಸಂಚಾರ ಮಾಡಿದ್ದಾರೆ.

ನಿನ್ನೆ ಒಂದೇ ದಿನದಲ್ಲಿ ಒಟ್ಟು 9,66,732 ಪ್ರಯಾಣಿಕರು ಮೆಟ್ರೋದಲ್ಲಿ ಪ್ರಯಾಣಿಸಿದ್ದಾರೆ. ಇದು ಮೆಟ್ರೋ ಇತಿಹಾಸದಲ್ಲೇ ಮೊದಲ ಬಾರಿಗೆ ಇಷ್ಟೊಂದು ಮಂದಿ ಪ್ರಯಾಣ ಬೆಳೆಸಿದ್ದು.

Comments are closed.