Rafale Fighter Jet: ಭಾರತದಲ್ಲಿ ತಯಾರಾಗುತ್ತೆ ರಫೆಲ್ ಯುದ್ಧವಿಮಾನದ ಫ್ಯೂಸಲಾಜ್: ಡಸೊ ಏವಿಯೇಷನ್ ಹಾಗೂ ಟಾಟಾ ಗ್ರೂಪ್ ಒಪ್ಪಂದ

Share the Article

Rafale Fighter Jet: ಮುಂದಿನ ದಿನಗಳಲ್ಲಿ ವಿಶ್ವದ ಶಕ್ತಿಶಾಲಿ ಯುದ್ಧವಿಮಾನಗಳಲ್ಲಿ ಒಂದೆನಿಸಿದ ರಫೇಲ್ ಫೈಟರ್ ಜೆಟ್​​ನ ಮುಖ್ಯ ಭಾಗವೊಂದು ಭಾರತದಲ್ಲೇ ತಯಾರಾಗಲಿದೆ. ಫ್ರಾನ್ಸ್ ದೇಶದ ಡಸ್ಸೋ ಏವಿಯೇಶನ್ ಜೊತೆ ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಒಪ್ಪಂದ ಮಾಡಿಕೊಂಡಿದ್ದು, ಏರ್​​ಕ್ರಾಫ್ಟ್​​ನ ಮುಖ್ಯ ಭಾಗವಾದ ಫ್ಯೂಸಲಾಜ್ ತಯಾರಾಗಲಿದೆ.
ಇದುವರೆಗೂ ಫ್ರಾನ್ಸ್ ನ ಹೊರತು ಬೇರೆಲ್ಲೂ ಇವು ತಯಾರಾಗಿಲ್ಲ ಆದ್ದರಿಂದ ಭಾರತ ಈ ವಿಚಾರದಲ್ಲಿ ಹೊಸ ಇತಿಹಾಸ ಸೃಷ್ಟಿಸಲಿದೆ.

ಈ ಫ್ಯೂಸಲಾಜ್ ಗಳು ವಿಮಾನದ ಹೊರಕವಚವಾಗಿದ್ದು, ವಿಮಾನದ ಎಲ್ಲಾ ಭಾಗಗಳಿಗೂ ಇದು ಕೊಂಡಿ ಇದ್ದಂತೆ ಇರುತ್ತದೆ ಹಾಗೂ ಇದನ್ನು ವಿಮಾನ ಯಾವ ಉದ್ದೇಶಕ್ಕೆ ಬಳಕೆಯಾಗುತ್ತದೆ ಎಂಬುದರ ಆಧಾರದ ಮೇರೆಗೆ ಫ್ಯೂಸಲಾಜ್​ನ ರೂಪುರೇಖೆಯನ್ನು ಮಾಡಲಾಗುತ್ತದೆ.
ಇದರ ತಯಾರಿಕಾ ಘಟಕವನ್ನು ಹೈದರಾಬಾದ್ ನಲ್ಲಿ ಸ್ಥಾಪಿಸಿದ್ದು, ಇದರ ವಿವಿಧ ಭಾಗಗಳ ಇಲ್ಲೇ ತಯಾರಾಗುತ್ತವೆ. ವರದಿಗಳ ಪ್ರಕಾರ, 2027-28ರಲ್ಲಿ ಇಲ್ಲಿಂದ ಮೊದಲ ಫ್ಯೂಸಲಾಜ್ ಭಾಗ ಹೊರಬರುವ ನಿರೀಕ್ಷೆ ಇದೆ. ತಿಂಗಳಿಗೆ ಎರಡು ಫ್ಯೂಸಲಾಜ್​​ಗಳನ್ನು ಈ ಘಟಕದಲ್ಲಿ ತಯಾರಿಸಲು ಸಾಧ್ಯ ಎಂದು ಹೇಳಲಾಗುತ್ತಿದೆ.

Comments are closed.