Census 2027: ಕೇಂದ್ರದಿಂದ ಜನಗಣತಿ ಹಾಗೂ ಜಾತಿಗಣತಿ:

Share the Article

Census 2027: ಕೇಂದ್ರ ಸರ್ಕಾರವು ಜನಗಣತಿ ಹಾಗೂ ಜಾತಿಗಣತಿಯ ದಿನಾಂಕವನ್ನು ನಿಗದಿಪಡಿಸಿದ್ದು, 2027 ರ ಮಾರ್ಚ್ 1 ರಂದು ಪ್ರಾರಂಭವಾಗಲಿದೆ. ಇದು ಎರಡು ಹಂತಗಳಲ್ಲಿ ನಡೆಯಲಿವೆ.

ಅಕ್ಟೊಬರ್ 1 2026 ರಿಂದ ಅಂದರೆ ಹಿಮ ಬೀಳುವ ಮೊದಲೇ ಹಿಮ ರಾಜ್ಯಗಳಲ್ಲಿ ಗಣತಿ ಆರಂಭವಾಗುತ್ತದೆ. 2011 ರ ನಂತರ 2021 ರಲ್ಲಿ ನಡೆಯಬೇಕಾದುದನ್ನು ಕೋವಿಡ್ ಕಾರಣದಿಂದ ಮುಂದೂಡಲಾಗಿತ್ತು. ಹಾಗೂ 1931 ರ ನಂತರ ಇದೇ ಮೊದಲ ಬಾರಿ ಜಾತಿಗಣತಿ ನಡೆಯುತ್ತಿದೆ.

ಹಾಗೂ ಇದೇ ಮೊದಲ ಬಾರಿಗೆ ಡಿಜಿಟಲ್ ಗಣತಿ ಮಾಡಲಿದ್ದು, ಜನರು ಸ್ವವಿವರಗಳನ್ನು ತಾವೇ ನಮೂಡಿಸಬಹುದಾಗಿದ್ದು, 2029-2030 ರ ಹೊತ್ತಿಗೆ ಅಂತಿಮ ವರದಿ ದೊರಕುತ್ತದೆ. ಇನ್ನು ಅದಾದ ಬಳಿಕ ಲೋಕ ಸಭಾ ಹಾಗೂ ವಿಧಾನ ಸಭಾಗಳ ಕ್ಷೇತ್ರ ವಿಂಗಡನೆಗಳು ನಡೆಯಲಿದ್ದು, ಅದಾದ ಬಳಿಕ ಮಹಿಳೆಯರ 33 ಶೇಕಡಾ ಮೀಸಲಾತಿ ಜಾರಿ ಮಾಡಬಹುದಾಗಿದೆ.

Comments are closed.