Maharashtra: ಮದುವೆಗೆ ಮನೆಯವರ ಒತ್ತಡ: ಅವಳಿಷ್ಟಕ್ಕೆ ಬಿಡಿ ಎಂದ ಹೈ ಕೋರ್ಟ್

Maharashtra: ಓದಿ, ಕೆಲಸ ಹಿಡಿದುಬಿಟ್ಟರೆ ಸಾಕು ಹೆಣ್ಣಿಗೆ ಮದುವೆ ವಯಸ್ಸು ಬಂತು ಎಂದು ತೀರ್ಮಾನಿಸಿ ಬಿಡ್ತಾರೆ.

ಹೌದು ಮಹಾರಾಷ್ಟ್ರದಲ್ಲೊಂದು ಅಂಥದ್ದೇ ಘಟನೆ ನಡೆದಿದೆ. ನಾನು ಮದುವೆ ಆಗೋದಿಲ್ಲ ಅಂತ ಹುಡುಗಿ ಹಠ ಮಾಡಿದ್ರೆ, ಮದುವೆ ಮಾಡೇ ಮಾಡಿಸ್ತೇವೆ ಅಂತ ಪಾಲಕರು ಪಟ್ಟು ಹಿಡಿದಿದ್ದಾರೆ. ಕೊನೆಗೂ ಹೈಕೋರ್ಟ್ ನಲ್ಲಿ ಪ್ರಕರಣ ಇತ್ಯರ್ಥ ಆಗಿರುವಂತದ್ದು.
24 ವರ್ಷದ ಬಿಹಾರದ ಹುಡುಗಿ ಒಬ್ಬಳು ಪುಣೆಯ ರಿಯಲ್ ಎಸ್ಟೇಟ್ ಏಜೆನ್ಸಿಯಲ್ಲಿ ಕೆಲಸ ಮಾಡ್ತಿದ್ದಾಳೆ. ಕಳೆದ ತಿಂಗಳು ಅವಳು ಬಿಹಾರದಲ್ಲಿರುವ ತನ್ನ ಮನೆಗೆ ಹೋಗಿದ್ಲು, ಈ ಟೈಂನಲ್ಲಿ ಕುಟುಂಬದವರು ಮದುವೆಗೆ ಒತ್ತಾಯ ಮಾಡಿದ್ದಾರೆ.ಈ ಟೈಂನಲ್ಲಿ ಹುಡುಗಿ ತನ್ನ ಫ್ರೆಂಡ್ಸ್ ಸಹಾಯ ಪಡೆದಿದ್ದಾಳೆ. ಹುಡುಗಿ ಪರ ಆಕೆ ಫ್ರೆಂಡ್ಸ್ ಬಾಂಬೆ ಹೈಕೋರ್ಟ್ ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ರು. ಹುಡುಗಿಯನ್ನು ಬಿಡುಗಡೆ ಮಾಡುವಂತೆ ಬೇಡಿಕೊಂಡಿದ್ದರು.
ಮೇ 29 ರಂದು ಈ ಕುರಿತಾಗಿ ಕೋರ್ಟ್ ನಲ್ಲಿ ವಿಚಾರಣೆ ನಡೆದಿದ್ದು, ಅವಳ ಕುಟುಂಬ ಅವಳನ್ನು ಬಲವಂತವಾಗಿ ಮದುವೆ ಮಾಡಲು ಮುಂದಾಗಿದ್ದು, ಹುಡುಗಿಗೆ ಹೆತ್ತವರ ಜೊತೆ ವಾಸಿಸಲೂ ಇಷ್ಟವಿಲ್ಲದ ಕಾರಣ ಹುಡುಗಿ ತನ್ನ ಇಚ್ಛೆಯಂತೆ ಬದುಕಬಹುದು ಎಂದು ಕೋರ್ಟ್ ತೀರ್ಪು ನೀಡಿದೆ.
Comments are closed.