Udupi: ಉಡುಪಿ: ಜೋಳಿಗೆ ಸುತ್ತಿಕೊಂಡು ಉಸಿರುಕಟ್ಟಿ ಮಗು ಮೃತ್ಯು!

Share the Article

Udupi: ಉಡುಪಿ (Udupi) ನಗರದ ಸಮೀಪ ಬಾಡಿಗೆ ಮನೆಯೊಂದರಲ್ಲಿ ಜೋಳಿಗೆ ಕಟ್ಟಿದ್ದ ಸೀರೆ ಮಗುವಿನ ಕುತ್ತಿಗೆಗೆ ಸುತ್ತಿಕೊಂಡು ಉಸಿರುಕಟ್ಟಿ ಮಗು ಮೃತಪಟ್ಟ ಘಟನೆ ನಡೆದಿದೆ.

ಅಯ್ಯಪ್ಪ ಇವರು ಉಡುಪಿಯಲ್ಲಿ ಕಳೆದ 3 ವರ್ಷಗಳಿಂದ ಕೆಲಸವನ್ನು ಮಾಡಿಕೊಂಡಿದ್ದು, ಉಡುಪಿ ತಾಲೂಕು ಪುತ್ತೂರು ಗ್ರಾಮದ ನಿಟ್ಟೂರಿನಲ್ಲಿ ಗಂಗಾಧರ ರವರ ಬಾಡಿಗೆ ಮನೆಯಲ್ಲಿ ವಾಸಮಾಡಿಕೊಂಡಿದ್ದರು. ಜೂನ್ 04ರಂದು ಬೆಳಿಗ್ಗೆ 8 ಗಂಟೆಗೆ ಮಗು ಕಾಳಮ್ಮ(1) ಅವರನ್ನು ಜೋಲಿಯಲ್ಲಿ ಹಾಕಿ ಮಲಗಿಸಿ ತಾಯಿ ಕೆಲಸಕ್ಕೆಂದು ಹೋಗಿದ್ದು, ವಾಪಸ್ಸು ಮನೆಗೆ 11:30 ಗಂಟೆಗೆ ಬಂದಾಗ ಮಗುವಿನ ಕುತ್ತಿಗೆಗೆ ಜೋಲಿಗೆ ಕಟ್ಟಿದ್ದ ಸೀರೆಯು ಸುತ್ತಿಕೊಂಡು ನೇತಾಡುವ ಸ್ಥಿತಿಯಲ್ಲಿ ಕಂಡು ಬಂದಿತ್ತು.

ತಕ್ಷಣ ಮಗುವನ್ನು ಉಡುಪಿ ಆದರ್ಶ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿ ಮಗುವನ್ನು ಪರೀಕ್ಷಿಸಿದ ವೈದ್ಯಾಧಿಕಾರಿಗಳು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

Comments are closed.