RCB Champion: ಚಾಲೆಂಜ್‌ ಅಂದ್ರೆ ಇದು ನೋಡಿ: ಆರ್‌ಸಿಬಿ ಕಪ್ ಗೆದ್ದರೆ ಅರ್ಧ ತಲೆ ಬೋಳಿಸುವೆ!

Share the Article

RCB Champion: ಅಭಿಮಾನ ಅನ್ನೋದು ಹುಚ್ಚುತನದ ಪರಮಾವದಿ ಆಗಬಾರದು. ನಿನ್ನೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಘಟನೆ ಹಲವರ ಪಾಲಿಗೆ ಅಭಿಮಾನ ಅತಿರೇಕಕ್ಕೆ ಹೋಗಿ ಮಸನ ಸೇರುವಂತಾಯಿತು. ಹಾಗೆ ಇಲ್ಲೊಬ್ಬ ಕ್ರಿಕಟ್ ಅಭಿಮಾನಿ ಆರ್ಸಿಬಿ ಕಪ್‌ ಗೆದ್ದ ಪರಿಣಾಮ ಅರ್ಧ ತಲೆ ಬೋಳಿಸಿಕೊಳ್ಳಬೇಕಾಯಿತು. ಈತ ಸಿಎಸ್ಕೆ ತಂಡದ ಅಭಿಮಾನಿ. ಆರ್‌ಸಿಬಿ ಅಭಿಮಾನಿಗಳ ವಿರುದ್ಧ ಈತ ಬೆಟ್‌ ಕಟ್ಟಿದ್ದ. ಆತ ಎಂದಿನಂತೆ ಈ ಬಾರಿಯೂ ಆರ್‌ಸಿಬಿ ಸೋಲುತ್ತದೆ ಎಂಬ ಭರವಸೆಯಲ್ಲಿದ್ದ. ಆದರೆ ಆರ್‌ಸಿಬಿ ಈ ಸಲ ಕಪ್‌ ತಮ್ಮದಾಗಿಸಿಕೊಂಡಿತು.

ಆರ್.ಸಿಬಿ ಕಪ್ ಗೆದ್ದರೆ ತಲೆ ಬೋಳಿಸಿಕೊಳ್ಳುವುದಾಗಿ ಚಾಲೆಂಜ್ ಮಾಡಿದ್ದ ಈತ ಸಿಎಸ್ಕೆ ಅಭಿಮಾನಿ ಮಹಾವೀರ ಕಿರಣ ಕಡಕೋಳ. ಬೆಳಗಾವಿ ಜಿಲ್ಲೆ ಬೈಲಹೊಂಗಲ ಪಟ್ಟಣದ ಮಹಾವೀರ, ಆರ್.ಸಿಬಿ ಅಭಿಮಾನಿಗಳಿಗೆ ಉರಿಸುವುದಕ್ಕೆ ಹೋಗಿ ಈತ ತಾನೇ ಅರ್ಧ ತಲೆ ಬೋಳಿಸಿಕೊಳ್ಳುವ ಇಕ್ಕಟ್ಟಿಗೆ ಸಿಲುಕಿಸಿಕೊಂಡಿದ್ದಾನೆ.

ಆರ್.ಸಿಬಿ ಕಪ್ ಗೆದ್ದರೆ ಅರ್ಧ ತಲೆ ಬೋಳಸ್ತಿನಿ ಅಂತಾ ಆರ್.ಸಿಬಿ ಸ್ನೇಹಿತರಿಗೆ ಸವಾಲು ಹಾಕಿದ್ದನು. ಆರ್.ಸಿಬಿ ಐಪಿಎಲ್ ‌ಕಪ್ ಗೆದ್ದಿದೆ. ಹಾಗಾಗಿ ಹಾಕಿದ ಸವಾಲಿನಿಂತೆ ಸ್ನೇಹಿತರು ಮತ್ತು ಆರಸಿಬಿ ಅಭಿಮಾನಿಗಳ ಮುಂದೆ ತಲೆ ಬೋಳಿಸಿಕೊಂಡಿದ್ದಾನೆ ಸಿಎಸ್ಕೆ ಅಭಿಮಾನಿ ಮಹಾವೀರ. ಈ ವೇಳೆ ಆರ್.ಸಿಬಿ, ಆರ್.ಸಿಬಿ, ಆರ್.ಸಿಬಿ ಅಂತಾ ಆರ್‌ಸಿಬಿ ಅಭಿಮಾನಿಗಳು ಘೋಷಣೆ ಕೂಗಿದರು. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಫುಲ್ ವೈರಲ್ ಆಗ್ತಿದೆ.

Comments are closed.