RCB: ಕನ್ನಡದ ಬಾವುಟ ಹಿಡಿದು ಆರ್‌ಸಿಬಿ ಗೆಲುವು ಸಂಭ್ರಮಿಸಿದ ವಿರಾಟ್ ಕೊಹ್ಲಿ!

Share the Article

RCB: ಗುಜರಾತಿನ ಅಹಮದಾಬಾದ್ ನಗರದಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಪಂಜಾಬ್ ತಂಡವನ್ನು ಮಣಿಸಿ 18ನೇ ಸೀಸನ್‌ನ ಐಪಿಎಲ್ 2025 ಟ್ರೋಫಿ ಗೆದ್ದ ಆರ್‌ಸಿಬಿ (RCB) ತಂಡ ಬೆಂಗಳೂರಿಗೆ ಆಗಮಿಸಿ ವಿಜಯೋತ್ಸವ ಆಚರಿಸಿದೆ. ಈ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಕನ್ನಡದ ಬಾವುಟ ಹಿಡಿದು ಅಭಿಮಾನಿಗಳಿಗೆ ನಮನ ಸಲ್ಲಿಸಿದರು. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಂಡವನ್ನು ಬರಮಾಡಿಕೊಂಡರು.

ವಿರಾಟ್ ಕೊಹ್ಲಿ ತಮ್ಮ ಕೈಯಲ್ಲಿ ಕನ್ನಡದ ಹಳದಿ-ಕೆಂಪು ಬಾವುಟವನ್ನು ಹಿಡಿದು ಬೀಸುತ್ತಾ ನಗುತ್ತಲೇ ಅಭಿಮಾನಿಗಳಿಗೆ ನಮನ ಅರ್ಪಿಸಿದರು. ಈ ಕ್ಷಣವನ್ನು ಕಣ್ತುಂಬಿಕೊಂಡ ಕನ್ನಡದ ಜನತೆ ಸಂಭ್ರಮ ಜೋರಾಗಿತ್ತು.

Comments are closed.