Mangaluru: ಮಂಗಳೂರಿನಲ್ಲಿ ಇದೇ ತಿಂಗಳು ಯುಬಿ ಬಿಯರ್ ಫ್ಯಾಕ್ಟರಿ ಕ್ಲೋಸ್: ದಿಢೀರ್ ನಿಲ್ಲಿಸಲು ಕಾರಣವೇನು?

Mangaluru: ಯುನೈಟೆಡ್ ಬ್ರೂವರೀಸ್ ಬಿಯರ್ ಕಂಪನಿಯು ಇದೇ ಜೂನ್ ತಿಂಗಳ ಅಂತ್ಯಕ್ಕೆ ಮಂಗಳೂರಿನಲ್ಲಿ (Mangaluru) ಉತ್ಪಾದನಾ ಫ್ಯಾಕ್ಟರಿಯನ್ನು ಕ್ಲೋಸ್ ಮಾಡಲಿದೆ. ಸದ್ಯಕ್ಕೆ ಬೆಂಗಳೂರು, ಮೈಸೂರು ಮತ್ತು ಮಂಗಳೂರಿನಲ್ಲಿ ಫ್ಯಾಕ್ಟರಿ ಹೊಂದಿದ್ದು ಕರಾವಳಿ ಜಿಲ್ಲೆಯ ಫ್ಯಾಕ್ಟರಿಯನ್ನು ನಿಲ್ಲಿಸುವುದಾಗಿ ಹೇಳಿಕೊಂಡಿದೆ.
ಮಂಗಳೂರಿನ ಫ್ಯಾಕ್ಟರಿಯನ್ನು ನಿಲ್ಲಿಸುವುದರಿಂದ ರಾಜ್ಯದಲ್ಲಿ ಒಟ್ಟು ವ್ಯವಹಾರದಲ್ಲಿ ಯಾವುದೇ ವ್ಯತ್ಯಯ ಆಗುವುದಿಲ್ಲ ಎಂದು ಯುಬಿಎಲ್ ಸೆಬಿ ಸಂಸ್ಥೆಗೆ ಸಲ್ಲಿಸಿರುವ ವರದಿಯಲ್ಲಿ ಹೇಳಿದೆ. ಮಂಗಳೂರು ಬದಲು ಮೈಸೂರಿನ ನಂಜನಗೂಡಿನಲ್ಲಿರುವ ಫ್ಯಾಕ್ಟರಿಯನ್ನು ಮತ್ತಷ್ಟು ವಿಸ್ತರಣೆ ಮಾಡಲು ಕಂಪನಿ ಮುಂದಾಗಿದೆ. ಸ್ಥಳಾಂತರದೊಂದಿಗೆ, ಇಲ್ಲಿರುವ ಉದ್ಯೋಗಿಗಳಿಗೂ ಸೂಕ್ತ ವ್ಯವಸ್ಥೆಯನ್ನು ಮಾಡುವುದಾಗಿ ಹೇಳಿಕೊಂಡಿದೆ. ಮೈಸೂರಿನಲ್ಲಿ ಕಂಪನಿ ವಿಸ್ತರಣೆ ಮಾಡುವ ಮೂಲಕ ಉತ್ಪಾದನೆ ಮತ್ತು ಕಾರ್ಯ ನಿರ್ವಹಣೆಯಲ್ಲಿ ದೊಡ್ಡ ಮಟ್ಟದ ಬದಲಾವಣೆಯೂ ಆಗಲಿದೆ ಎಂದು ಹೇಳಿದೆ.
ಮಂಗಳೂರಿನ ಫ್ಯಾಕ್ಟರಿಯನ್ನು ನಿಲ್ಲಿಸುವುದು ಏಕೆ ಎನ್ನುವ ಬಗ್ಗೆ ಕಂಪನಿ ಮಾಹಿತಿ ನೀಡಿಲ್ಲ. 2012ರಲ್ಲಿ ಮಂಗಳೂರಿನ ಬೈಕಂಪಾಡಿ ಇಂಡಸ್ಟ್ರಿಯಲ್ ಏರಿಯಾದಲ್ಲಿ ಯುಬಿಎಲ್ ಫ್ಯಾಕ್ಟರಿ ಆರಂಭಗೊಂಡಿದ್ದು ಮಂಗಳೂರು ಘಟಕದ ಜಿಎಸ್ಟಿ ಮಾಹಿತಿ ಪ್ರಕಾರ ವಾರ್ಷಿಕ 500 ಕೋಟಿ ವಹಿವಾಟು ನಡೆಸುತ್ತಿದೆ ಎನ್ನುವ ಮಾಹಿತಿ ಇದೆ.
Comments are closed.