E sala cup namde: ಈ ಸಲ ಕಪ್ ನಮ್ದೆ.. ಈ ವಾಕ್ಯ ಹುಟ್ಟಿದ್ದು ಹೇಗೆ? ಇದರ ಜನಕ ಯಾರು? ತಂಡಕ್ಕೆ ಸ್ಪೂರ್ತಿಯಾಗಿದ್ದು ಹೇಗೆ?

E sala cup namde: ಈ ಸಲ ಕಪ್ ನಮ್ದೆ.. ಈ ಸಲ ಕಪ್ ನಮ್ದೆ.. ವಾವ್ಹ್ ಕೇಳ್ತಾ ಇದ್ರೆ ಇನ್ನೂ ಕೇಳಬೇಕು ಅನ್ನಿಸುತ್ತೆ.. ಜೋರಾಗಿ ಕೂಗಿ ಕೂಗಿ ಹೇಳಬೇಕು ಅನ್ನಿಸುತ್ತೆ. ಈ ಪದಕ್ಕೆ ಅಷ್ಟೊಂದು ಪವರ್ ಇದೆ. ಈ ಪದದಲ್ಲಿ ಕನ್ನಡಿಗರ ಭಾವನೆ ಅಡಗಿದೆ. ಶಕ್ತಿ ಅಡಗಿದೆ.. ಐಪಿಎಲ್ ಆರಂಭ ಆದ್ರೆ ಸಾಕು ಈ ಸಲ ಕಪ್ ನಮ್ದೆ ಅನ್ನೋ ಪದ ಎಲ್ಲೆಡೆ ರಾರಾಜಿಸುತ್ತೆ, ಅಷ್ಟೊಂದು ಕ್ರೇಜ್..
ಈ ಟ್ರೆಂಡ್ ಸೆಟ್ ಮಾಡಿದ್ದೇ ನಮ್ ಅರ್‌ಸಿಬಿ ಹುಲಿಗಳು.. ಬರೋಬ್ಬರಿ 18 ವರ್ಷದ ಬಳಿಕ ನಮ್ಮ ಆರ್‌ಸಿಬಿ ಕಪ್ ಗೆಲ್ಲುವ ಮೂಲಕ ಅಭಿಮಾನಿಗಳ ಕನಸನ್ನು ನನಸು ಮಾಡಿದೆ. ಈ ಕ್ಷಣಕ್ಕಾಗಿ ಕಾಯುತ್ತಿದ್ದ ಕೊಟ್ಯಾಂತರ ಅಭಿಮಾನಿಗಳ ಖುಷಿಗೆ ಪಾರವೇ ಇಲ್ಲ, ಆರ್‌ಸಿಬಿ ಕಪ್ ಗೆಲ್ಲುತ್ತಿದ್ದಂತೆ ಮಿಡ್‌ನೈಟ್‌ನಲ್ಲೇ ಪಟಾಕಿ ಸಿಡಿಸಿ, ಕುಣಿದು ಕುಪ್ಪಳಿಸಿ ಸೆಲೆಬ್ರೇಶನ್ ಮಾಡಿದ್ದಾರೆ.
ಕರ್ನಾಟಕಾದ್ಯಂತ ಈ ಸಲ ಕಪ್ ನಮ್ದೆ ಅನ್ನೋ ಪದ ಮನೆಯ ಮೂಲೆ ಮೂಲೆಗೂ ತಲುಪಿದೆ.. ಹಾಗಾದ್ರೆ ಈ ಸಲ ಕಪ್ ನಮ್ಮದೇ ಅನ್ನೋ ಪದ ಹುಟ್ಟಿದ್ದು ಹೇಗೆ? ಈ ಪದದ ಜನಕ ಯಾರು?, ಆರ್‌ಸಿಬಿಗೆ ಸಿಕ್ಕಿದ್ದು ಹೇಗೆ? ಇಲ್ಲಿದೆ ನೋಡಿ.. ಬರೋಬ್ಬರಿ 17 ವರ್ಷಗಳ ಕಾಲ ಈ ಕಪ್‌ಗಾಗಿ ಕಾದಿದ್ದ ವಿರಾಟ್ ಕೋಹ್ಲಿ ಕನಸು ನಿನ್ನೆ ನನಸಾಗಿದೆ. ಕೊನೆಗೂ ಕಿಂಗ್ ಕಪ್‌ಗೆ ಮುತ್ತಿಕ್ಕಿದ್ದಾರೆ. ಇಷ್ಟು ದಿನ ಕಾದ ಅಭಿಮಾನಿಗಳ ಆಸೆ ಈಡೇರಿದೆ. ಕೊನೆವರೆಗೂ ಈ ಪದಗಳಿಗೆ ಅರ್ಥ ಬಂದಿದೆ. ಅದೇ ಈ ಸಲ ಕಪ್ ನಮ್ಮದು..
2016ರಲ್ಲಿ ಆರ್‌ಸಿಬಿ ನಾಯಕರಾಗಿದ್ದ ವಿರಾಟ್ ಕೋಹ್ಲಿ ಒಳ್ಳೆ ಫಾರ್ಮ್ ನಲ್ಲಿದ್ರು. ಆದರೆ ಪೈನಲ್ನಲ್ಲಿ ಹೈದರಬಾದ್ನ ಸನ್ ರೈಸರ್ಸ್ ವಿರುದ್ದ ಕೇವಲ 8 ರನ್‌ಗೆ ಸೋಲನುಭವಿಸಬೇಕಾಯಿತು. ಕಪ್ ಎತ್ತಿ ಹಿಡಿಯುವ ಆಸೆ ಭಗ್ನವಾಗಿತ್ತು. ಇನ್ನು 2017ರಲ್ಲಿ ಅಂಥ ಒಳ್ಳೆ ಆಡವಾಡದೆ ತಂಡ ಹೀನಾಯ ಪ್ರದರ್ಶನ ನೀಡಿತ್ತು. ಆದರೆ ಅಭಿಮಾನಿಗಳು ಮಾತ್ರ ತಮ್ಮ ತಂಡವನ್ನು ಬಿಟ್ಟುಕೊಡಲಿಲ್ಲ. ಅಲ್ಲೆ ನೋಡಿ ಈ ಸಲ ಕಪ್ ನಮ್ದೇ ಅನ್ನೋ ಘೋಷ ವಾಕ್ಯ ಹುಟ್ಟುಕೊಂಡಿದ್ದು. ಅದೇಷ್ಟೇ ಬಾರಿ ಸೋತರು ಅಭಿಮಾನಿಗಳು ಮಾತ್ರ ಕೈ ಬಿಡಲಿಲ್ಲ. ನಿರಾಸೆಗೊಳ್ಳಲಿಲ್ಲ. ಗೆಲುವನ್ನು ಮುಂದೆ ಹಾಕುತ್ತಲೇ ಚಾತಕ ಪಕ್ಷಿಯಂತೆ ಕಾದರು.
ಪ್ರತೀ ವರ್ಷ ಐಪಿಎಲ್ ಪಂದ್ಯ ನಡೆಯುವಾಗಲು ಈ ಸಲ ಕಪ್ ನಮ್ದೇ ಅನ್ನೋ ಘೋಷ ವಾಕ್ಯದೊಂದಿಗೆ ಅಭಿಮಾನಿಗಳು ಹಾಜರಾಗುತ್ತಿದ್ದರು. ಅದೇ ವಾಕ್ಯ ಆರ್‌ಸಿಬಿ ಅಧಿಕೃತ ಜಾಲತಾಣವನ್ನು ಸೇರಿಕೊಂಡಿತು. ಈ ಸಲ ಕಪ್ ನಮ್ಮದೇ ವಾಕ್ಯ ಹುಟ್ಟಿದ್ದು ಇದೇ ಅಭಿಮಾನಿ ದೇವರುಗಳಿಂದ.
ಮುಂದೆ ಇದೇ ವಾಕ್ಯ ತಂಡಕ್ಕೆ ಸ್ಪೂರ್ತಿ ತುಂಬಿತು. 2017ರ ಸೋಲಿಗೆ ಜಗ್ಗದ ಆರ್‌ಸಿಬಿ ತಂಡ 2018ರ ಅನ್ಬಾಕ್ಸ್ ಕಾರ್ಯಕ್ರಮದಲ್ಲಿ ವಿರಾಟ್ ಕೋಹ್ಲಿ, ಈ ಸಲ ಕಪ್ ನಮ್ಮದೇ ಎಂದು ಅಧಿಕೃತವಾಗಿ ಘೋಷಿಸಿದ್ರು. ಅಲ್ಲಿಂದ ನೋಡಿ ʻಈ ಸಲ ಕಪ್ ನಮ್ಮದೇʼ ಆರ್‌ಸಿಬಿ ತಂಡದ ಘೋಷವಾಕ್ಯವಾಗಿ ಎಲ್ಲರ ಬಾಯಲ್ಲೂ ಹರಿದಾಡಿತು. ಆದರೆ 2018ರಲ್ಲೋ ಕಪ್ ನಮ್ಮದಾಗಲಿಲ್ಲ. ಆದರೆ ಅಭಿಮಾನಿಗಳು ಮಾತ್ರ ಈ ವಾಕ್ಯವನ್ನು ನಿಲ್ಲಿಸಲೇ ಇಲ್ಲ. ಪ್ರತೀ ಬಾರಿಯೂ ಆರ್‌ಸಿಬಿ ಐಪಿಎಲ್ ಸೋತಾಗಲೂ ಅಭಿಮಾನಿಗಳು ಮಾತ್ರ ಈ ಬಾರಿ ಕಪ್ ನಮ್ಮದೇ ಎಂದು ಎದೆ ಉಬ್ಬಿಸಿ ಹೇಳುತ್ತಿದ್ದರು.
ಯಾರೂ ಏನೇ ಟೀಕೆ ಮಾಡಿದರೂ ಅಭಿಮಾನಿಗಳು ಮಾತ್ರ ಬಿಡಲಿಲ್ಲ. ತಂಡಕ್ಕೆ ಇದೇ ಸ್ಪೂರ್ತಿಯಾಗಿ ಬೆನ್ನು ತಟ್ಟಿತು. ಈ ವಾಕ್ಯ ಹುಟ್ಟಿದ ಬರೋಬ್ಬರಿ 8 ವರ್ಷಗಳ ಬಳಿಕ ಆರ್‌ಸಿಬಿ ಕಪ್ ಗೆದ್ದಿದೆ. ಅಭಿಮಾನಿಗಳಿಗೆ ದೊಡ್ಡ ಬಹುಮಾನವನ್ನೇ ನೀಡಿದೆ. ಕ್ರೀಡಾಂಗಣ ತುಂಬಾ ಕೇವಲ ಈ ಸಲ ಕಪ್ ನಮ್ಮದೇ ಅನ್ನೋ ವಾಕ್ಯ ಮಾತ್ರ ಮಾರ್ದನಿಸುತ್ತಲೇ ಇದೆ. ಇದು ಮುಂದೆಯೂ ರಾರಾಜಿಸುತ್ತಲೇ ಇರುತ್ತದೆ. ಹ್ಯಾಟ್ಸ್ ಆಪ್ ಟು ಆರ್‌ಸಿಬಿ ಪ್ಯಾನ್ಸ್..
Comments are closed.