RCB Champion: ಆರ್‌ಸಿಬಿಗೆ ಐಪಿಎಲ್‌ ಗೆಲುವು : ಸಂಭ್ರಮಾಚರಣೆಗೆ ದಾಖಲೆ ಮಟ್ಟದ ಮದ್ಯ ಮಾರಾಟ

Share the Article

RCB Champion: ಕನ್ನಡಿಗರಿಗೆ ಆರ್‌ಸಿಬಿ ತಂಡ ಅಂದ್ರೆ ಪಂಚ ಪ್ರಾಣ. ಸತತ 17 ವರ್ಷಗಳ ಕಾಲ ಯಾವುದೇ ಕಪ್‌ ಗೆಲ್ಲದಿದ್ದರೂ, ಅಭಿಮಾಣಿಗಳು ತಂಡವನ್ನು ಬೆಂಬಲಿಸುತ್ತಲೇ ಬಂದಿದ್ದಾರೆ. ಒಂದಲ್ಲ ಒಂದು ದಿನ ಕಪ್‌ ನಮ್ದೇ ಅನ್ನೋ ಭರವಸೆಯಲ್ಲಿ ಕಾದಿದ್ದರು. ಆ ಕನಸು ನಿನ್ನೆ ನಸಾಗಿದೆ. ಮಾಮೂಲು ಮ್ಯಾಚ್‌ ಇದ್ರೆನೇ ಆರ್‌ಸಿಬಿ ಅಭಿಮಾನಿಗಳು ಸಂಭ್ರಮಿಸುತ್ತಾರೆ. ಇನ್ನು ಐಪಿಎಲ್ ಫೈನಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಆಡುತ್ತಿದೆ ಅಂದ್ರೆ ಕೇಳಬೇಕೆ. ಪ್ಯಾನ್ಸ್ಗಳಿಗೆ ಹಬ್ಬ.

ಆರ್‌ಸಿಬಿ ಪಂಬಾಬ್‌ ವಿರುದ್ಧ ಕಪ್‌ ಗೆದ್ದ ಸಂಭ್ರಮಾಚರಣೆಯನ್ನು ಬಹುತೇಕ ಅಭಿಮಾನಿಗಳು ಮದ್ಯಪಾನ ಮಾಡುತ್ತಾ ಸಂಭ್ರಮಿಸಿದ್ದಾರೆ. ಹಾಗಾಗಿ ನಿನ್ನೆ ದಾಖಲೆ ಮಟ್ಟದ ಮದ್ಯ ಮಾರಾಟವಾಗಿದೆ ಎಂಬ ಮಾಹಿತಿಯಿದೆ. ಆರ್‌ಸಿಬಿ ಗೆಲ್ಲಬೇಕೆಂಬುದು ಕೇವಲ ಬೆಂಗಳೂರಿಗರಿಗೆ ಮಾತ್ರವಲ್ಲ, ದೇಶಾದ್ಯಂತ ಅಭಿಮಾನಿಗಳ ನಿರೀಕ್ಷೆಯಾಗಿತ್ತು. ಈ 18 ವರ್ಷಗಳ ಕನಸು ನಿನ್ನೆ ನನಸಾಗಿದೆ. ಆರ್‌ಸಿಬಿ ಕೊನೆಗೂ ಗೆಲ್ಲುತ್ತೆ ಎಂದು ಗೊತ್ತಾಗುತ್ತಿದ್ದಂತೆ ಅಭಿಮಾನಿಗಳ ದಂಡು ಬಾರ್‌ಗಳಿಗೆ ದೌಡಾಯಿಸಿದೆ. ಎಣ್ಣೆಗೆ ಸಿಕ್ಕಾಪಟ್ಟೆ ಡಿಮಾಂಡ್ ವ್ಯಕ್ತವಾಗಿದೆ.

ನಿನ್ನೆ ರಾತ್ರಿ ಒಂದೇ ದಿನ ರಾಜ್ಯದಲ್ಲಿ 1.48 ಲಕ್ಷ ಬಾಕ್ಸ್ ಬಾಟಲ್ ಬೀಯರ್ ಸೇಲ್ ಆಗಿದೆ. ಬರೋಬ್ಬರಿ 30 ಕೋಟಿ 66 ಲಕ್ಷ ಬೆಲೆಯ ಬಿಯರ್ ಮಾರಾಟ ಮಾಡಲಾಗಿದೆ. 127 ಕೋಟಿ 88 ಲಕ್ಷ ಮೌಲ್ಯದ 1.28 ಲಕ್ಷ ಬಾಕ್ಸ್ ಲಿಕ್ಕರ್ ಮಾರಾಟವಾಗಿದೆ. ಒಂದೇ ದಿನದಲ್ಲಿ ಇಷ್ಟೊಂದು ಮದ್ಯ ಸೇಲ್ ಆಗಿರುವುದು ಎಲ್ಲರನ್ನು ಬೆಚ್ಚಿ ಬೀಳಿಸಿದೆ. ಎಲ್ಲಾ ಕ್ರಿಕೆಟ್ ಅಭಿಮಾನಿಗಳು ನಿನ್ನೆ ಸಂಜೆಯಿಂದಲೇ ಮ್ಯಾಚ್ ನೋಡಲು ಒಟ್ಟಿಗೆ ಕುಳಿತು ಗೆಲುವಿನ ಸಂಭ್ರಮವನ್ನು ಆಚರಿಸಲು ಮದ್ಯ ಖರೀದಿ ಮಾಡಿದ್ದಾರೆ.

Comments are closed.