RCB Win: ಆರ್ ಸಿಬಿ ತಂಡಕ್ಕೆ ವಿಧಾನಸೌಧದ ಮುಂದೆ ಸನ್ಮಾನ – ಸರ್ಕಾರಕ್ಕೆ ಪತ್ರ ಬರೆದ ಕೆಎಸ್ ಸಿಎಲ್

RCB Win: ಸುಮಾರು 17 ವರ್ಷ ಕಪ್ ಗಾಗಿ ಸೆಣಸಾಟ ನಡೆಸಿದ್ದ ಆರ್ ಸಿಬಿ ತಂಡ ಕೊನೆಗೂ 18ನೇ ಬಾರಿಯ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಅಪಾರ ಆಬಿಮಾನಿಗಳ ನಿರೀಕ್ಷೆಯನ್ನು ನನಸಾಗಿಸಿದೆ.

ಈ ಸಂಭ್ರಮಕ್ಕಾಗಿ ಐಪಿಎಲ್ ಫೈನಲ್ ಗೆದ್ದ ಆರ್ ಸಿಬಿ ತಂಡಕ್ಕೆ ವಿಧಾನಸೌಧದ ಮುಂದೆ ಸನ್ಮಾನ ಮಾಡಲು ಸರ್ಕಾರಕ್ಕೆ ಕೆಎಸ್ ಸಿಎಲ್ ಪತ್ರ ಬರೆದಿದೆ.
ಆರ್ ಸಿಬಿ ತಂಡದ ಗೆಲುವಿಗಾಗಿ ಕ್ರಿಕೆಟ್ ಅಭಿಮಾನಿಗಳಷ್ಟೇ ಉತ್ಸುಕರಾಗಿದ್ದಿದ್ದು, ಜನಪ್ರತಿನಿಧಿಗಳೂ ಕೂಡ. ಹಾಗಾಗಿ ಈ ಕಾರ್ಯಕ್ರಮಕ್ಕೆ ಸರ್ಕಾರದ ಅನುಮತಿ ಖಂಡಿತ ಸಿಗಲಿದೆ. ಇದಕ್ಕಾಗಿ ಕೆಎಸ್ ಸಿಎಲ್ ಕಾರ್ಯಕ್ರಮ ನಿಗದಿಗಾಗಿ ಕಾಯುತ್ತಿದೆ. ಸರ್ಕಾರದ ಅನುಮತಿಯೊಂದು ಸಿಗಬೇಕು. ನಂತರವಷ್ಟೆ ಸಮಯ ನಿಗದಿಯಾಗಲಿದೆ. ಎಲ್ಲಾ ಆಟಗಾರರಿಗೂ ತಕ್ಕ ಗೌರವ ಸಮರ್ಪಿಸಲು ಕೆಎಸ್ ಸಿಎಲ್ ಕಾಯುತ್ತಿದೆ.
Comments are closed.