KMF : ಒಂದೇ ದಿನದಲ್ಲಿ ಬರೋಬ್ಬರಿ 1 ಕೋಟಿ ಲೀಟರ್ ಹಾಲು ಸಂಗ್ರಹ – ಭರ್ಜರಿ ದಾಖಲೆ ಬರೆದ ಕೆಎಂಎಫ್!

KMF: ಕೆಎಂಎಫ್ ರಾಜ್ಯದ ರೈತರ ಜೀವನಾಡಿ. ಈ ಸಂಸ್ಥೆ ಹೊಸ ಹೊಸ ದಾಖಲೆಗಳನ್ನು ಬರೆಯುತ್ತಲೇ ಇರುತ್ತದೆ. ಇದೀಗ, ಹಾಲು ಸಂಗ್ರಹದಲ್ಲಿ ಕೆಎಂಎಫ್ ಮತ್ತೆ ದಾಖಲೆ ಬರೆದಿದೆ. ಒಂದೇ ದಿನ ಸಾರ್ವಕಾಲಿಕ ಗರಿಷ್ಠ 1.06 ಕೋಟಿ ಲೀಟರ್ ಹಾಲು ಸಂಗ್ರಹ ಮಾಡುವ ಮೂಲಕ ಕಳೆದ ವರ್ಷದ ತನ್ನದೇ ದಾಖಲೆಯನ್ನು ಹಿಂದಿಕ್ಕಿದೆ. ಮುಂಗಾರು ಮಳೆ ಚುರುಕು, ಹಸಿರು ಹುಲ್ಲು ಹಾಗೂ ಮೇವಿನ ಲಭ್ಯತೆಯ ಕಾರಣದಿಂದ ಹಾಲು ಉತ್ಪಾದನೆ ಹೆಚ್ಚಳವಾಗಿರುವುದು ಹಾಲು ಸಂಗ್ರಹ ಹೆಚ್ಚಳಕ್ಕೆ ಕಾರಣವಾಗಿದೆ.

ಕಳೆದ ವರ್ಷ ಜೂನ್ 28 ರಂದು 1 ಕೋಟಿ ಲೀಟರ್ ಹಾಲು ಸಂಗ್ರಹಿಸಲಾಗಿತ್ತು. ಆನಂತರ ದೈನಂದಿನ ಸರಾಸರಿ ಸಂಗ್ರಹ ಪ್ರಮಾಣದಲ್ಲಿ ಗಮನಾರ್ಹ ಏರಿಕೆ ಕಂಡಿತ್ತು. ಇದರೊಂದಿಗೆ, ಹಾಲು ಉತ್ಪಾದಿಸುವ ಪ್ರಮುಖ ರಾಜ್ಯವಾಗಿ ಕರ್ನಾಟಕ ಯಶಸ್ಸಿನ ದಾಪುಗಾಲು ಇಡುತ್ತಿದೆ.
Comments are closed.