Snehamayi Krishna: “ಕೈ ಬೆಚ್ಚಗೆ” ಮಾಡದಿದ್ರೆ ಮುಂಬಡ್ತಿ ಆದೇಶಗಳಿಗೆ ಸಹಿ ಇಲ್ಲ – ಸ್ನೇಹಮಯಿ ಕೃಷ್ಣ ಪತ್ರ

Share the Article

Snehamayi Krishna: ಮುಂಬಡ್ತಿ ಪಡೆಯಲು ಅರ್ಹತೆ ಇರುವ ಅಧಿಕಾರಿಗಳಿಗೆ/ಸಿಬ್ಬಂದಿಗಳಿಗೆ ಮುಂಬಡ್ತಿ ನೀಡುವಂತೆ ಕೇಂದ್ರ ಕಚೇರಿಯಿಂದ ಸೂಚನೆ ಬಂದಿದ್ದರೂ ಸಹ, ಕೆಲವು ಹಿರಿಯ ಪೊಲೀಸ್‌ ಅಧಿಕಾರಿಗಳು, ಮುಂಬಡ್ತಿ ಪಡೆಯಲು ಅರ್ಹತೆ ಇರುವವರು “ಕೈ ಬೆಚ್ಚಗೆ” ಮಾಡಿರುವುದಿಲ್ಲವಾದ್ದರಿಂದ, ಮುಂಬಡ್ತಿ ಆದೇಶಗಳಿಗೆ ಸಹಿ ಮಾಡಲು ಸಾಧ್ಯವಾಗಿರುವುದಿಲ್ಲ ಎಂಬುದು ತಿಳಿದುಬಂದಿರುವುದರಿಂದ, ದಕ್ಷಿಣ ವಲಯದ ಉಪ ಪೊಲೀಸ್‌ ಮಹಾ ನಿರೀಕ್ಷಕರಿಗೆ ಮತ್ತು ಪೊಲೀಸ್ ಆಯುಕ್ತರಿಗೆ ಮನವಿಪತ್ರ ನೀಡಿದ್ದೇನೆ ಎಂದು ಪತ್ರಕರ್ತ ಹಾಗೂ ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ಸಾಮಾಜಿಕ ಜಾಲ ತಾಣದಲ್ಲಿ ಬರೆದುಕೊಂಡಿದ್ದಾರೆ.

ಅಲ್ಲದೆ ತಾವು ದಕ್ಷಿಣ ವಲಯದ ಉಪ ಪೊಲೀಸ್‌ ಮಹಾ ನಿರೀಕ್ಷಕರಿಗೆ ಮತ್ತು ಪೊಲೀಸ್ ಆಯುಕ್ತರಿಗೆ ನೀಡಿದ ಮನವಿಪತ್ರದ ಪ್ರತಿಯನ್ನು ಜೊತೆಗೆ ಲಗತ್ತಿಸಿದ್ದಾರೆ. ಈಗಾಗಲೇ ಸಿಎಂ ಸಿದ್ದರಾಮಯ್ಯನವರು ಹಗರಣ ಮಾಡಿದ್ದಾರೆ ಎನ್ನಲಾದ ಮೂಡ ಹಗರದ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ. ಇದೀಗ ಮತ್ತೊಂದು ರಾಜ್ಯ ಸರ್ಕಾರದ ಕರ್ಮಕಾಂಡವನ್ನು ಹಿಡಿದು ಸಾರ್ವಜನಿಕರ ಮುಂದೆ ಬಂದಿದ್ದಾರೆ.

Comments are closed.