Sikkim Flood Situation: ಸಿಕ್ಕಿಂನಲ್ಲಿ ಭಾರೀ ಮಳೆ – ಪ್ರವಾಹಕ್ಕೆ ಸಿಲುಕಿದ್ದ 113 ಪ್ರವಾಸಿಗರ ರಕ್ಷಣೆ ಕಾರ್ಯಕ್ಕೆ ಹವಾಮಾನ ಅಡ್ಡಿ

Share the Article

Sikkim Flood Situation : ಈಶಾನ್ಯ ರಾಜ್ಯಗಳಲ್ಲಿ ಭಾರಿ ಮಳೆಯಾಗುತ್ತಿದ್ದು, ಅಸ್ಸಾಂನಲ್ಲಿ ಇದುವರೆಗೆ 11 ಸಾವುಗಳು ಸಂಭವಿಸಿವೆ, ನಂತರ ಅರುಣಾಚಲ ಪ್ರದೇಶದಲ್ಲಿ ಸಾವಿನ ಸಂಖ್ಯೆ 10 ಕ್ಕೆ ಏರಿದೆ. ಮಣಿಪುರದಲ್ಲಿ 19,800 ಕ್ಕೂ ಹೆಚ್ಚು ಜನರು ಬಾಧಿತರಾಗಿದ್ದಾರೆ ಮತ್ತು 3,000 ಕ್ಕೂ ಹೆಚ್ಚು ಮನೆಗಳು ಹಾನಿಗೊಳಗಾಗಿವೆ.

ಉತ್ತರ ಸಿಕ್ಕಿಂನ ಲಾಚೆನ್‌ನಲ್ಲಿ ಸಿಲುಕಿದ್ದ 113 ಪ್ರವಾಸಿಗರನ್ನು ಸ್ಥಳಾಂತರಿಸುವ ಕಾರ್ಯಕ್ಕೆ ಹವಾಮಾನ ನಿರಂತರ ಅಡ್ಡಿಪಡಿಸುತ್ತಸಿದೆ. ಒಂಬತ್ತು NDRF ಸಿಬ್ಬಂದಿಯನ್ನು ಹೊತ್ತ MI 17 ಹೆಲಿಕಾಪ್ಟರ್ ಬೆಳಗ್ಗೆ 6 ಗಂಟೆಗೆ ಪಾಕ್ಕೊಂಗ್ ವಿಮಾನ ನಿಲ್ದಾಣದಿಂದ ಹೊರಟಿತ್ತು. ಆದರೆ ಕಾರ್ಯಾಚರಣೆ ನಡೆಸಲಾಗದೇ ಹಿಂತಿರುಗಬೇಕಾಯಿತು.

ನಿರಂತರ ಮಳೆಯಿಂದಾಗಿ ಹಲವೆಡೆ ಭೂಕುಸಿತ ಸಂಭವಿಸಿದ್ದು ಪ್ರಮುಖ ರಸ್ತೆಗಳ ತುಂಬೆಲ್ಲಾ ನೀರು ತುಂಬಿದೆ. ಕೆಲವೆಡೆ ಭೂಕುಸಿತದಿಂದ ರಸ್ತೆಗಳನ್ನು ಬಂದ್‌ ಮಾಡಿದ್ದಕ್ಕೆ ಪ್ರವಾಸಿಗರು 36 ಗಂಟೆಗೂ ಹೆಚ್ಚು ಹೊತ್ತಿನಿಂದ ಲಾಚಿನ್‌ನಲ್ಲಿ ಸಿಲುಕಿಕೊಂಡಿದ್ದಾರೆ. ಭಾರತೀಯ ಹವಾಮಾನ ಇಲಾಖೆ ಉತ್ತರ ಸಿಕ್ಕಿಂನಲ್ಲಿ ಮುಂದಿನ ಮೂರು ದಿನಗಳವರೆಗೆ ಭಾರೀ ಮಳೆಯಾಗುವ ಎಚ್ಚರಿಕೆ ನೀಡಿ, ರೆಡ್ ಅಲರ್ಟ್ ಘೋಷಿಸಿದೆ.

ಈಶಾನ್ಯ ಭಾರತದಲ್ಲಿ ಮಳೆ ಅಬ್ಬರ: 40 ಸಾವು

ಭಾರತದ ದೇವಮೂಲೆ ಈಶಾನ್ಯ ರಾಜ್ಯಗಳಿಗೆ ಅವರಿಸಿದ ವರುಣ ದಿಗ್ಧಂಧನ ಇನ್ನೂ ಸಡಿಲವಾಗಿಲ್ಲ. ದಿಢೀರ್ ಪ್ರವಾಹದಿಂದ ದಿನೇ ದಿನೇ ಸಾವು ನೋವುಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಮಳೆ ಸಂಬಂಧಿ ಪ್ರಕರಣಗಳಲ್ಲಿ 40 ಜನರು ಸಾವನ್ನಪ್ಪಿದ್ದಾರೆ.

ಅರುಣಾಚಲ ಪ್ರದೇಶ, ಅಸ್ಸಾಂ, ತ್ರಿಪುರ, ಸಿಕ್ಕಿಂ, ಮೇಘಾಲಯ, ಮಿಜೋರಾಂನಲ್ಲಿ ಮಳೆಯ ಅವಾಂತರಗಳು ಹೆಚ್ಚಾಗಿವೆ. ಐದೂವರೆ ಲಕ್ಷಕ್ಕೂ ಹೆಚ್ಚು ಮಂದಿ ಬೀದಿಗೆ ಬಂದಿದ್ದಾರೆ. ಕೇವಲ ಅಸ್ಸಾಂನಲ್ಲೇ 1 ಲಕ್ಷದ 44 ಸಾವಿರಕ್ಕೂ ಹೆಚ್ಚು ಜನ ಪ್ರವಾಹದ ಬಾಹುಬಂಧನದಲ್ಲಿದ್ದಾರೆ. 1,400ಕ್ಕೂ ಹೆಚ್ಚು ಮನೆಗಳು ಹಾನಿಗೊಳಗಾಗಿವೆ. ಅಸ್ಸಾಂ ಜಿಲ್ಲೆಯಲ್ಲೇ ಮರಣ ಮಳೆಗೆ 9ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ.

ಸಿಕ್ಕಿಂನಲ್ಲಿ ಪ್ರವಾಹಕ್ಕೆ ಸಿಲುಕಿಕೊಂಡಿದ್ದ 34 ಮಂದಿಯನ್ನ ಭಾರತೀಯ ಸೇನೆ ಮತ್ತು ವಾಯುಪಡೆಯಿಂದ ಎರಡು MI-17 ವಿ5 ಹೆಲಿಕಾಪ್ಟರ್ ಬಳಸಿ ಎರ್‌ಲಿಫ್ಟ್ ಮಾಡಲಾಗಿದೆ. ಹೀಗೆ ಸಿಕ್ಕಿಂನಾದ್ಯಂತ ಸಂಕಷ್ಟಕ್ಕೆ ಸಿಲುಕಿದ್ದ 1,500 ಮಂದಿಯನ್ನ ರಕ್ಷಣೆ ಮಾಡಲಾಗಿದೆ.

ಭಾರೀ ಮಳೆಯಿಂದ ಸಿಕ್ಕಿಂನ ಲಾಂಚನ್ ಜಿಲ್ಲೆಯಲ್ಲಿನ ಆರ್ಮಿ ಕ್ಯಾಂಪ್ ಮೇಲೆ ಭೂಕುಸಿತವಾಗಿದೆ. ಇದೇ ಭೂಕುಸಿತದಿಂದ 3 ಮಂದಿ ಮಿಲಿಟರಿ ಯೋಧರ ಸಾವಾಗಿದ್ದು ಆರು ಸೈನಿಕರು ನಾಪತ್ತೆಯಾಗಿದ್ದಾರೆ. ಕೂಡಲೇ ಎಚ್ಚೆತ್ತ ಭಾರತೀಯ ಸೇನೆ, ನಾಪತ್ತೆಯಾದವರಿಗಾಗಿ ಹುಡುಕಾಟ ನಡೆಸಿದೆ.

Comments are closed.