Heart Attack: ಆರ್‌ಸಿಬಿ ವಿಜಯೋತ್ಸವ ಸಂದರ್ಭ ಕುಸಿದು ಬಿದ್ದು ಅಭಿಮಾನಿ ಸಾವು

Share the Article

Belagavi: ಆರ್‌ಸಿಬಿ ಐಪಿಎಲ್‌ ಗೆದ್ದ ಸಂಭ್ರಮದಲ್ಲಿ ಅಭಿಮಾನಿಯೋರ್ವ ಹೃದಯಾಘಾತದಿಂದ ಮೃತಪಟ್ಟ ಘಟನೆ ಬೆಳಗಾವಿಯಲ್ಲಿ ನಡೆದಿದೆ.

 

ಆರ್‌ಸಿಬಿ ಸಂಭ್ರಮದಲ್ಲಿ ಕುಣಿದು ಕುಪ್ಪಳಿಸುತ್ತಿದ್ದ ಸಂಭ್ರಮದಲ್ಲಿ ಏಕಾಏಕಿ ಹೃದಯಾಘಾತವಾಗಿದೆ. ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಅವರಾದಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.

 

ಮಂಜುನಾಥ ಕುಂಬಾರ(25) ಮೃತ ವ್ಯಕ್ತಿ. ಈತ ವಿರಾಟ್‌ ಕೊಹ್ಲಿ ಕಟ್ಟಾ ಅಭಿಮಾನಿಯಾಗಿದ್ದು, ಆರ್‌ಸಿಬಿ ಗೆಲುವಿನ ಸಂತಸದಲ್ಲಿ ಕುಣಿದು ಕುಪ್ಪಳಿಸುತ್ತಿದ್ದ ವೇಳೆ ಒಮ್ಮಿಂದೊಮ್ಮೆಗೆ ಹೃದಯಾಘಾತವಾಗಿದೆ. ಮಂಜುನಾಥ ಅಂತ್ಯಕ್ರಿಯೆ ಇಂದು ಮಧ್ಯಾಹ್ನ 12 ಗಂಟೆಗೆ ಗ್ರಾಮದಲ್ಲಿ ನಡೆಯಲಿದ್ದು, ಸ್ಥಳೀಯರು ದುರಂತಕ್ಕೆ ಕಣ್ಣೀರು ಹಾಕಿದ್ದಾರೆ. ಅವರಾದಿ ಗ್ರಾಮದಲ್ಲಿ ಶೋಕದ ವಾತಾವರಣ ಉಂಟಾಗಿದೆ.

Comments are closed.