Murder: ಹೆತ್ತವರನ್ನು ಕೊಲೆಗೈದ ಬ್ರಿಟನ್‌ನ ಯುವತಿ : 4 ವರ್ಷಗಳ ಕಾಲ ಮೃತದೇಹಗಳೊಂದಿಗೆ ಬದುಕು

Share the Article

Murder: ಬ್ರಿಟನ್‌ನಲ್ಲಿ ಯುವತಿಯೊಬ್ಬಳು ತನ್ನ ಹೆತ್ತವರನ್ನು ಕೊಂದು 4 ವರ್ಷಗಳ ಕಾಲ ಮೃತದೇಹಗಳೊಂದಿಗೆ ಬದುಕಿದ್ದಾಳೆ. ಸಾಲ ಮತ್ತು ಕ್ರೆಡಿಟ್ ಕಾರ್ಡ್‌ಗಳ ವಂಚನೆಯ ವಿಚಾರ ಬಹಿರಂಗವಾದರೆ ಹೆತ್ತವರು ಗದರಿಸುವ ಭಯದಲ್ಲಿ ಈ ಕೊಲೆಗಳನ್ನು ಮಾಡಿದ್ದಾಳೆಂದು ವರದಿಯಾಗಿದೆ.

ತಂದೆಗೆ ವಿಷ ನೀಡಿ ಕೊಲೆ ಮಾಡಿದ್ದು, ಮರುದಿನ ತಾಯಿಯನ್ನು ಸುತ್ತಿಗೆಯಿಂದ ಹೊಡೆದು, ಚಾಕುವಿನಿಂದ ಇರಿದು ಕೊಂದಿದ್ದಾಳೆ. ಕೊಲೆಯ ಬಳಿಕ ಹೆತ್ತವರ ಬದುಕಿಯೇ ಇದ್ದಾರೆಂದು ಬಿಂಬಿಸಿದ್ದಳು.

ಕ್ರೂರ ಕೃತ್ಯ ಎಸಗಿದ ವೃದ್ಧ ದಂಪತಿಯ ಮಗಳು ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಲಾಕ್‌ಡೌನ್ ನೆಪದಲ್ಲಿ ತನ್ನ ಹೆತ್ತವರ ಬ್ಯಾಂಕ್ ಖಾತೆಗಳಿಂದ ಹಣವನ್ನು ಹಿಂಪಡೆದು ಪಿಂಚಣಿ ಸಂಗ್ರಹಿಸುವುದನ್ನು ಮುಂದುವರೆಸಿದಳು. ಅವಳು ಎರಡು ಮೃತ ದೇಹಗಳನ್ನು ಮನೆಯಲ್ಲಿ ಮರೆ ಮಾಡಿದಳು. ನಾಲ್ಕು ವರ್ಷಗಳಿಂದ ತನ್ನ ಹೆತ್ತವರ ಹೆಸರಿನಲ್ಲಿ ಸಂದೇಶಗಳನ್ನು ಕಳುಹಿಸುತ್ತಲೇ ಇದ್ದಳು. ತಾವಿಬ್ಬರೂ ಪ್ರವಾಸದಲ್ಲಿದ್ದಾರೆ ಮತ್ತು ತನ್ನ ಸಹೋದರಿಯನ್ನು ನೋಡಿಕೊಳ್ಳಲು ಬಯಸುತ್ತೇನೆ ಎಂದು ಹೇಳುವ ಮೂಲಕ ಅವಳು ಎಲ್ಲರನ್ನೂ ದಾರಿ ತಪ್ಪಿಸುತ್ತಿದ್ದಳು.

ಕೋರ್ಟ್ಗೆ ಒದಗಿಸಿದ ಸಾಕ್ಷ್ಯಗಳ ಪ್ರಕಾರ, ವರ್ಜೀನಿಯಾ ಮೊದಲು ತನ್ನ ತಂದೆಗೆ ವಿಷ ನೀಡಿದ್ದಾಳೆ. ಮರುದಿನ ಬೆಳಿಗ್ಗೆ, ವಳ ತಾಯಿಗೆ ಈ ವಿಷಯ ತಿಳಿಯಿತು. ಹಾಗಾಗಿ ಆಕೆ ತನ್ನ ತಾಯಿಯನ್ನೂ ಕೊಂದಿದ್ದಾಳೆ. ಅವಳ ತಾಯಿ ರೇಡಿಯೋ ಕೇಳುತ್ತಿದ್ದಾಗ, ಸುತ್ತಿಗೆಯಿಂದ ಹೊಡೆದಿದ್ದಾಳೆ. ಆದರೆ ಅವಳ ತಾಯಿ ಅಲ್ಲಿಗೆ ಪ್ರಾಣ ಬಿಡಲಿಲ್ಲ. ನಂತರ ಚಾಕುವಿನಿಂದ ಇರಿದು ಸಾಯಿಸಿದೆ ಎಂದು ವರ್ಜೀನಿಯಾ ಹೇಳಿದ್ದಾಳೆ. ಈಕೆ ಮಾಡಿದ ತನ್ನ ಹೆತ್ತವರ ಕೊಲೆಯನ್ನು ದೃಢಪಡಿಸಿದ ನ್ಯಾಯಾಲಯ ವರ್ಜೀನಿಯಾಗೆ ಬರೋಬ್ಬರಿ 36 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

Comments are closed.