Bomb Threat: ದೇರಳಕಟ್ಟೆ ಕಣಚೂರು ಆಸ್ಪತ್ರೆಗೆ ಬಾಂಬ್ ದಾಳಿ ಬೆದರಿಕೆ !

Bomb Threat: ದೇರಳಕಟ್ಟೆಯ ನಾಟೆಕಲ್ಲಿನ ಕಣಚೂರು ಆಸ್ಪತ್ರೆ ಹಾಗೂ ವೈದ್ಯಕೀಯ ಕಾಲೇಜನ್ನು ಇಂದು ಬೆಳಗ್ಗೆ 11 ಗಂಟೆಗೆ ಬಾಂಬು ಇಟ್ಟು ಸ್ಪೋಟಿಸುವುದಾಗಿ( Bomb Threat) ಅಪರಿಚಿತರಿಂದ ಫೋನ್ ಕರೆ ಬಂದಿದ್ದು, ಈ ಬಗ್ಗೆ ಆಸ್ಪತ್ರೆ ಅಧಿಕಾರಿಗಳ ಮಾಹಿತಿಯಂತೆ ಪೊಲೀಸರು , ಬಾಂಬು ನಿಷ್ಕ್ರಿಯ ದಳ ಮತ್ತು ಶ್ವಾನ ದಳವನ್ನ ಕರೆಸಿ ಆಸ್ಪತ್ರೆ ಹಾಗೂ ಮೆಡಿಕಲ್ ಕಾಲೇಜು ಕ್ಯಾಂಪಸನ್ನ ತಪಾಸಣೆ ನಡೆಸಿದ್ದಾರೆ. ಕೊನೆಗೆ, ಇದೊಂದು ಹುಸಿ ಬಾಂಬು ಕರೆ ಎಂದು ಪೊಲೀಸರು ತಿಳಿಸಿದ್ದಾರೆ.

ಬೆಳಗ್ಗೆ 8.15ರ ಹೊತ್ತಿಗೆ ಆಸ್ಪತ್ರೆಯ ಹೆರಿಗೆ ವಿಭಾಗದ ಸ್ಥಿರ ದೂರವಾಣಿಗೆ ಬಂದ ಕರೆಯನ್ನು ಪಿಜಿ ವಿದ್ಯಾರ್ಥಿನಿಯೋರ್ವಳು ಸ್ವೀಕರಿಸಿದ್ದು ಇಂಗ್ಲೀಷಲ್ಲಿ ಮಾತನಾಡಿದ ವ್ಯಕ್ತಿಯೋರ್ವ ಬೆಳಗ್ಗೆ 11 ಗಂಟೆಗೆ ಆಸ್ಪತ್ರೆ ಹಾಗೂ ಮೆಡಿಕಲ್ ಕಾಲೇಜಲ್ಲಿ ಬಾಂಬ್ ಸ್ಪೋಟಿಸುವುದಾಗಿ ಹೇಳಿದ್ದು ಎಲ್ಲರನ್ನು ಕೂಡಲೇ ಆಸ್ಪತ್ರೆಯಿಂದ ಹೊರಗೆ ಕಳುಹಿಸುವಂತೆ ಬೆದರಿಕೆ ಹಾಕಿದ್ದಾನೆ. ಆನಂತರವೂ ನಾಲೈದು ಬಾರಿ ಕರೆ ಬಂದಿದ್ದು ಬ್ಯಾರಿ ಭಾಷೆಯಲ್ಲೂ ಬೆದರಿಕೆ ಹಾಕಲಾಗಿದೆಯಂತೆ. ಉಳ್ಳಾಲ ಪ್ರಕರಣ ಪೊಲೀಸರು ದಾಖಲಿಸಿಕೊಂಡಿದ್ದು ಕರೆ ಬಂದ ನಂಬರ್ ಗಳನ್ನು ಪರಿಶೀಲಿಸಿ ಆರೋಪಿಗಳನ್ನು ಶೀಘ್ರದಲ್ಲಿ ಪತ್ತೆ ಹಚ್ಚುವುದಾಗಿ ತಿಳಿಸಿದ್ದಾರೆ.
Comments are closed.