Death: ಮಂಗಗಳ ಮೇಲೆ ಎಸೆದ ಕೊಡಲಿ: 2 ವರ್ಷದ ಮಗುವಿನ ಕತ್ತು ಸೀಳಿತು!

Share the Article

Death: ಮಂಗಗಳನ್ನು ಓಡಿಸುವ ಸಲುವಾಗಿ ವ್ಯಕ್ತಿಯೊಬ್ಬ ಎಸೆದ ಕೊಡಲಿ ತನ್ನದೇ 2 ವರ್ಷದ ಮಗುವಿನ ಕತ್ತನ್ನೇ ಸೀಳಿದ (Death) ದುರಂತ ಘಟನೆ ಉತ್ತರ ಪ್ರದೇಶದಲ್ಲಿ ಮಂಗಳವಾರ ನಡೆದಿದೆ.

ಉತ್ತರ ಪ್ರದೇಶದ ಮೊರಾದಾಬಾದ್‌ನಲ್ಲಿ

ಆರವ್ ಎಂಬ ಬಾಲಕ ಮನೆಯೊಳಗೆ ಆಟವಾಡುತ್ತಿದ್ದಾಗ ಮಂಗಗಳ ಗುಂಪು ಮನೆಯೊಳಗೆ ಪ್ರವೇಶಿಸಿತ್ತು. ಆಗ ಬಾಲಕನ ತಂದೆ ಲಖನ್ ಸಿಂಗ್ ಮಂಗಗಳು ಮಗುವಿನ ಮೇಲೆ ದಾಳಿ ಮಾಡಬಹುದು ಎಂದು ಭಾವಿಸಿ ಅವುಗಳನ್ನು ಹೊಡೆಯಲು ಛಾವಣಿಗೆ ಹೋಗಿ ಮಂಗಗಳನ್ನು ಗುರಿಯಾಗಿಸಿಕೊಂಡು ಕೊಡಲಿಯನ್ನು ಬೀಸಿದ್ದಾನೆ. ದುರದೃಷ್ಟವಶಾತ್ ಕೊಡಲಿ ಮಂಗಗಳಿಗೆ ತಾಗುವ ಬದಲು ಮಗುವಿನ ಕತ್ತನ್ನೇ ಸೀಳಿದೆ. ಮಗುವನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ವೈದ್ಯರು ಮಗು ಸಾವನ್ನಪ್ಪಿದ್ದಾಗಿ ಘೋಷಿಸಿದ್ದಾರೆ. ಘಟನೆ ಬಗ್ಗೆ ಪೊಲೀಸರು ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Comments are closed.