Actress Rakshita Prem: Bangalore Stampede: ಇದೊಂದು ಸಂಭ್ರಮಾಚರಣೆ ರೀತಿ ಇರಲಿಲ್ಲ, ರಾಜಕೀಯ ಈವೆಂಟ್‌ನಂತೆ ಇತ್ತು: ರಕ್ಷಿತಾ ಪ್ರೇಮ್

Actress Rakshita Prem: ವಿಧಾನಸೌದದ ಬಳಿ ಆರ್‌ಸಿಬಿ ಸಂಭ್ರಮಾಚರಣೆ ವೇಳೆ ನಡೆದ ನೂಕುನುಗ್ಗಲಿನಲ್ಲಿ ನಡೆದ ದುರಂತದಲ್ಲಿ ಮೃತರ ಸಂಖ್ಯೆ 11 ಕ್ಕೆ ಏರಿದೆ. ಹಲವರ ಪರಿಸ್ಥಿತಿ ಚಿಂತಾಜನಕವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆಶಿ ಬೌರಿಂಗ್ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ. ವಿರೋಧ ಪಕ್ಷ ಬಿಜೆಪಿಯ ರಾಜ್ಯಾಧ್ಯಕ್ಷ ವಿಜಯೇಂದ್ರ ಕೂಡಾ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.
ಈ ಘಟನೆ ಬೆನ್ನಲ್ಲೇ ಸ್ಯಾಂಡಲ್‌ವುಡ್ ನಟಿ ರಕ್ಷಿತಾ ಪ್ರೇಮ್ ಅವರು ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲೊಂದು ಪೋಸ್ಟ್ ಮಾಡಿದ್ದಾರೆ.
‘ಅತ್ಯಂತ ಕೆಟ್ಟ ರೀತಿಯಲ್ಲಿ ಈ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ. ಇದೊಂದು ಸಂಭ್ರಮಾಚರಣೆ ರೀತಿಯಲ್ಲಿ ಇಲ್ಲವೇ ಇಲ್ಲ, ರಾಜಕೀಯ ಪಕ್ಷದ ಸಭೆಯಂತೆ ಇತ್ತು. ಯಾವುದೇ ರೀತಿಯಲ್ಲಿ ಇದು ಸೂಕ್ತ ರೀತಿಯಲ್ಲಿ ಇರಲಿಲ್ಲ. ಕ್ರೀಡೆ ಯಾವುದೇ ಪಕ್ಷದ ಸಂಭ್ರಮಾಚರಣೆ ಅಲ್ಲ, ಇದು ಯಾವುದೇ ವಿಧದಲ್ಲೂ ರಾಜಕೀಯಕ್ಕೆ ಸಂಬಂಧಪಟ್ಟಿಲ್ಲ’ ಎಂದು ನಟಿ ರಕ್ಷಿತಾ ಪ್ರೇಮ್ ಅವರು ಪೋಸ್ಟ್ ಮಾಡಿದ್ದಾರೆ.
ಈ ಪೋಸ್ಟ್ ಇದೀಗ ಬಹಳಷ್ಟು ವೈರಲ್ ಆಗುತ್ತಿದೆ.
Comments are closed.