RCB: ಶಿವಮೊಗ್ಗದಲ್ಲಿ ಆರ್‌ಸಿಬಿ ಗೆಲುವಿನ ಸಂಭ್ರಮಾಚರಣೆ ವೇಳೆ ಅಪಘಾತ: ಅಭಿಮಾನಿ ಸ್ಥಳದಲ್ಲೇ ಸಾವು!

Share the Article

RCB: ಆರ್ಸಿಬಿ ತಂಡ ಐಪಿಎಲ್ನಲ್ಲಿ ಗೆಲುವು ಸಾಧಿಸಿದ ಹಿನ್ನೆಲೆ ಮಂಗಳವಾರ ರಾತ್ರಿ (ಜೂ.3) ಅಭಿಮಾನಿಗಳ ಸಂಭ್ರಮಾಚರಣೆ ವೇಳೆ ಬೈಕ್ ಅಪಘಾತದಲ್ಲಿ ಯುವಕನೊಬ್ಬ ಸಾವನ್ನಪ್ಪಿದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

ತಡರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ವೆಂಕಟೇಶ್ ನಗರದ ನಿವಾಸಿ ಅಭಿನಂದನ್ (21) ಮೃತಪಟ್ಟಿದ್ದಾನೆ.

ಆರ್ಸಿಬಿ ವಿಜಯೋತ್ಸವಕ್ಕಾಗಿ ಯುವಕರ ಗುಂಪು ಬೈಕ್ ರ್ಯಾಲಿಯನ್ನು ಏರ್ಪಡಿಸಿತ್ತು. ಈ ಮೆರವಣಿಗೆಯ ವೇಳೆ ಎರಡು ಬೈಕ್‌ಗಳು ಮುಖಾಮುಖಿ ಡಿಕ್ಕಿ ಹೊಡೆದಿದ್ದು, ತೀವು ಗಾಯಗೊಂಡ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಈ ಬಗ್ಗೆ ಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Comments are closed.