Mangaluru airport: ಮಂಗಳೂರು ಏರ್‌ಪೋರ್ಟ್ ಗೆ ಪ್ರತಿಷ್ಠಿತ ಬ್ರಿಟಿಷ್ ಸೇಫ್ಟಿ ಕೌನ್ಸಿಲ್ ಪ್ರಶಸ್ತಿ!

Share the Article

Mangaluru airport: ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವು (Mangaluru airport) ಬ್ರಿಟಿಷ್ ಸೇಫ್ಟಿ ಕೌನ್ಸಿಲ್ ನಿಂದ ಡಿಸ್ಟಿಂಕ್ಷನ್ ವಿಭಾಗದಲ್ಲಿ ಅಂತರಾಷ್ಟ್ರೀಯ ಸುರಕ್ಷತಾ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.

ಏರ್ಪೋರ್ಟ್ ನಲ್ಲಿ ಆರೋಗ್ಯ, ಶುಚಿತ್ವ ಮತ್ತು ಸುರಕ್ಷತೆಯ ಉನ್ನತ ಗುಣಮಟ್ಟವನ್ನು ಕಾಯ್ದುಕೊಳ್ಳಲು ಮತ್ತು ಬದ್ಧತೆಯನ್ನು ಪ್ರದರ್ಶಿಸಿದ ಸಂಸ್ಥೆಗಳಿಗೆ ಈ ಪ್ರಶಸ್ತಿ ನೀಡಲಾಗುತ್ತದೆ.

ಅತ್ಯುನ್ನತ ಡಿಸ್ಟಿಂಕ್ಷನ್ ವಿಭಾಗದಲ್ಲಿ ಸ್ಥಾನ ಪಡೆದ ನೂರ ಹದಿನೇಳು ಭಾರತೀಯ ಸೈಟ್ ಗಳಲ್ಲಿ ಮಂಗಳೂರು ನಿಲ್ದಾಣ ಕೂಡಾ ಒಂದಾಗಿದೆ. ಮೇ ೨೯ರಂದು ಮುಂಬೈನಲ್ಲಿ ನಡೆದ ಸಮಾರಂಭದಲ್ಲಿ ವಿಮಾನ ನಿಲ್ದಾಣದ ಹಿರಿಯ ಅಧಿಕಾರಿಯೋರ್ವರು ಈ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ.

Comments are closed.