NEET UG 2025: NEET UG ಉತ್ತರ ಕೀ ಬಿಡುಗಡೆ, ಈ ರೀತಿ ಚೆಕ್ ಮಾಡಿ

NEET UG 2025: ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು NEET UG ಪರೀಕ್ಷೆಯ ತಾತ್ಕಾಲಿಕ ಉತ್ತರ ಕೀಲಿಗಳನ್ನು ಬಿಡುಗಡೆ ಮಾಡಿದ್ದು, ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್ neet.nta.nic.in ಗೆ ಭೇಟಿ ನೀಡಿ ನೋಂದಣಿ ಸಂಖ್ಯೆಯನ್ನು ನಮೂದಿಸುವ ಮೂಲಕ ಉತ್ತರ ಕೀಲಿಯನ್ನು ಪರಿಶೀಲಿಸಬಹುದು ಹಾಗೂ ಡೌನ್ಲೋಡ್ ಮಾಡಬಹುದಾಗಿದೆ.

ಹಾಗೂ ಅಭ್ಯರ್ಥಿಗಳು ಜೂನ್ 3 ರಿಂದ ಜೂನ್ 5 ರವರೆಗೆ ಬಿಡುಗಡೆಯಾದ ತಾತ್ಕಾಲಿಕ ಉತ್ತರ ಕೀಲಿಯ ಬಗ್ಗೆ ಆಕ್ಷೇಪಣೆಗಳನ್ನು ನೋಂದಾಯಿಸಬಹುದಾಗಿದೆ. ಮೇ.4 ರಂದು ಈ ಪರೀಕ್ಷೆ ನಡೆದಿದ್ದು, ಸುಮಾರು 21 ಲಕ್ಷ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು.
ಭಾರತದಾದ್ಯಂತ 557 ನಗರಗಳ 4,750 ಕೇಂದ್ರಗಳು ಹಾಗೂ ವಿದೇಶದಲ್ಲಿರುವ 14 ಕೇಂದ್ರಗಳಲ್ಲಿ ಪರೀಕ್ಷೆಯನ್ನು ನಡೆಸಲಾಗಿತ್ತು. ಇನ್ನೂ ಜೂನ್ 14 ರಂದು ಫಲಿತಾಂಶವನ್ನು ಘೋಷಿಸುವ ನಿರೀಕ್ಷೆಯಿದೆ. ಯಾವ ಮಾದರಿಯಲ್ಲಿ ಅಂಕಗಳನ್ನು ನೀಡಲಾಗಿದೆ ಎಂದು NEET UG ಯ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡುವ ಮೂಲಕ ತಿಳಿದುಕೊಳ್ಳಬಹುದಾಗಿದೆ.
Comments are closed.