Crime: ಹನಿಮೂನ್‌ಗೆಂದು ಹೋದವರು ಹೆಣವಾಗಿ ದೊರಕಿದ್ರು: ಪತಿಯ ಶವ ಪತ್ತೆ

Crime:ಮದುವೆಯಾದ ನವದಂಪತಿಗಳು ಹನಿಮೂನ್ ಗೆಂದು ಮೇಘಾಲಯಕ್ಕೆ ತೆರಳಿದ್ದಾಗ ನಾಪತ್ತೆಯಾದಂತಹ ಘಟನೆ ಕೆಲವು ದಿನಗಳ ಹಿಂದೆಯಷ್ಟೇ ನಡೆದಿದ್ದು, ಘಟನೆ ನಡೆದ 10 ದಿನಗಳ ಬಳಿಕ ಪತಿಯ ಮೃತ ದೇಹವನ್ನು ಪೊಲೀಸರು ಡ್ರೋನ್ ಮೂಲಕ ಪತ್ತೆ ಹಚ್ಚಿದ್ದಾರೆ.

ಮಧ್ಯ ಪ್ರದೇಶದ ಇಂದೋರ್ ನ ರಾಜ ರಘುವಂಶಿ ಹಾಗೂ ಸೋನಂ ರಘುವಂಶಿ ಮೇ. 11 ರಂದು ಮದುವೆಯಾಗಿದ್ದರು ಹಾಗೂ ಮೇ. 20 ರಂದು ಹನಿಮೂನ್ ಗೆ ತೆರಳಿದ್ದು, 23 ನೆ ತಾರೀಖು ಕಡೆಯದಾಗಿ ಸಂಪರ್ಕಕ್ಕೆ ಸಿಕ್ಕಿರುತ್ತಾರೆ. ಇದರಿಂದ ಕಂಗಾಲಾದ ಕುಟುಂಬದವರು ದೂರು ನೀಡಿದ್ದು, ಪೊಲೀಸ್ ಕಾರ್ಯಾಚರಣೆ ನಡೆಯುತ್ತಿತ್ತು.
ಇದೀಗ ಮೇಘಾಲಯದ ವೀ ಸಾವ್ ಡಾಂಗ್ ಜಲಪಾತದ ಬಳಿ ಇರುವ ಆಳವಾದ ಕಮರಿನಲ್ಲಿ ಶವ ಪತ್ತೆಯಾಗಿದ್ದು, ಎಸ್ ಡಿ ಆರ್ ಎಫ್ ಹಾಗೂ ಇನ್ನಿತರ ವಿಶೇಷ ತಂಡಗಳು ಕೂಡಿ ಶವಗಳನ್ನು ಆಚೆ ತೆಗೆದಿವೆ. ಇನ್ನೂ ಶವದ ಬಲ ಕೈಯಲ್ಲಿ ರಾಜ ಎಂದು ಹಚ್ಚೆ ಹಾಕಿಸಿದ್ದರಿಂದ ಪತ್ತೆ ಮಾಡಲು ಸಹಕಾರಿಯಾಗಿದ್ದು, ಇದೀಗ ಮರಣೋತ್ತರ ಪರೀಕ್ಷೆಗೆ ಕಳಿಸಲಾಗಿದೆ. ಇನ್ನೂ ಸೋನಂ ಅವರು ಪತ್ತೆಯಾಗದ ಕಾರಣ ಅವರ ಹುಡುಕಾಟಕ್ಕಾಗಿ ಡ್ರೋನ್ ಕಾರ್ಯಾಚರಣೆ ನಡೆಯುತ್ತಿದೆ.
ಇದು ಮೇಲ್ನೋಟಕ್ಕೆ ಕೊಲೆ ಪ್ರಕರಣದಂತೆ ಕಂಡುಬರುತ್ತಿರುವುದರಿಂದ ಎಸ್ ಐ ಟಿ ತಂಡದ ರಚನೆ ಮಾಡಿ ತನಿಖೆ ನಡೆಸುತ್ತೇವೆಂದು ಅಲ್ಲಿನ ಪೊಲೀಸ್ ವರಿಷ್ಠಾಧಿಕಾರಿ ವಿವೇಕ್ ಸೈಮ್ ತಿಳಿಸಿದ್ದಾರೆ.
Comments are closed.