BBMP:ಜನಸೇವಕ್ ಗೆ ಕರೆ ಮಾಡಿ: ಮನೆಯಲ್ಲೇ ಕುಳಿತು ಇ-ಖಾತೆ ಪಡೆಯಿರಿ

BBMP:ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಗೆ ಆಸ್ತಿ ನಿರ್ವಹಣೆ ಸವಾಲಿನ ವಿಷಯವಾಗಿದ್ದು, ಈ ಸಮಸ್ಯೆಯ ಪರಿಹಾರಕ್ಕೆ ಬಿಬಿಎಂಪಿ ಹೊಸ ಪರಿಹಾರ ಹುಡುಕಿದ್ದು, ಇನ್ನು ಮುಂದೆ ಜನಸೇವಕರನ್ನು ಸಂಪರ್ಕಿಸುವ ಮೂಲಕ ಮನೆಯಲ್ಲೇ ಕುಳಿತು ಇ ಖಾತ ಪಡೆಯಬಹುದಾಗಿದೆ. ಹಾಗೂ ಈ ಮೂಲಕ ತೆರಿಗೆ ವ್ಯವಸ್ಥೆಯಲ್ಲೂ ಕೂಡ ಸುಧಾರಣೆಯಾಗುತ್ತಿದೆ.

ಇನ್ನೂ ಜನಸೇವಕರಿಗೆ ಕರೆ ಮಾಡುವ ಮೂಲಕ ಕೇವಲ 3 ದಿನದಲ್ಲಿ ಖಾತ ಪಡೆಯಬಹುದಾಗಿದ್ದು, ಅವರುಗಳ ಮೊಬೈಲ್ ನಂಬರ್ ಅನ್ನು ಕೂಡ ಬಿಬಿಎಂಪಿ ತಿಳಿಸಿದೆ.
ಆಸ್ತಿ ಮಾಲೀಕರು 080 49203888ಗೆ ಕರೆ ಮಾಡಬಹುದು ಹಾಗೂ http://janasevaka.karnataka.gov.in/ ಮೂಲಕ ಸಂಪರ್ಕಿಸಿದರೆ ನಿಮ್ಮ ಮನೆಗೆ ಬಂದು ಇ-ಖಾತೆ ಅರ್ಜಿ ಸಲ್ಲಿಸುತ್ತಾರೆ. ನೀವು ಅಂತಿಮ ಇ-ಖಾತೆಯನ್ನು 2-3 ದಿನಗಳಲ್ಲಿ ಪಡೆಯಬಹುದಾಗಿದ್ದು, ಅದಕ್ಕಾಗಿ ಯಾವುದೇ ಬಿಬಿಎಂಪಿ ಕಚೇರಿಗೆ ಭೇಟಿ ನೀಡಬೇಡಿ, ಯಾವ ಅಧಿಕಾರಿಗಳಿಗೂ ಕರೆ ಮಾಡುವ ಅಗತ್ಯವಿರುವುದಿಲ್ಲ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರು ತಿಳಿಸಿದ್ದಾರೆದ್ದಾರೆ.
Comments are closed.