Rayachur: ಹಟ್ಟಿ ಚಿನ್ನದ ಗಣಿಯಲ್ಲಿ ಏ‌ರ್ ಬ್ಲಾಸ್ಟ್; ಕಾರ್ಮಿಕ ಸಾವು, ಮತ್ತೊಬ್ಬನಿಗೆ ಗಂಭೀರ ಗಾಯ!

Share the Article

Rayachur: ಲಿಂಗಸೂಗೂರು ತಾಲೂಕಿನ ಹಟ್ಟಿ ಚಿನ್ನದ ಗಣಿ ಸೆಂಟ್ರಲ್ ಶಾಫ್ಟ್‌ನ 28 ಅಡಿಯಲ್ಲಿ ಏ‌ರ್ ಬ್ಲಾಸ್ಟ್‌ನಿಂದ ಕಲ್ಲು ಅದಿರು ಕುಸಿದು ಒಬ್ಬ ಕಾರ್ಮಿಕ ಮೃತಪಟ್ಟು, ಮತ್ತೊಬ್ಬ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ. ಶರಣಬಸವ ವೀರಾಪುರ (35) ಮೃತ ಕಾರ್ಮಿಕ. ಗಾಯಾಳು ನಿರೂಪಾದಿ ಪಾಮನಕಲ್ಲೂರಗೆ ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಆಸ್ಪತ್ರೆಗೆ ರವಾನಿಸಿದ್ದಾರೆ ಎಂದು ತಿಳಿದುಬಂದಿದೆ.

ಕಲ್ಲು ಅದಿರಿನಡಿ ಸಿಲುಕಿರುವ ಮೃತ ದೇಹವನ್ನು ಹೊರ ತರಲು ಕಾರ್ಯಾಚರಣೆ ಮುಂದುವರೆದಿದೆ. ಪ್ರತಿ ವರ್ಷ ಕಂಪನಿಯಲ್ಲಿ ದುಡಿಯುವ ಕಾರ್ಮಿಕರು ಸಾವು ನೋವುಗಳು ಸಂಭವಿಸಿದರೂ ಕಂಪನಿ ಜಾಗ್ರತೆ ವಹಿಸುತ್ತಿಲ್ಲ. ಕಾರ್ಮಿಕರಿಗೆ ಯಾವುದೇ ರಕ್ಷಾ ಕವಚಗಳು ಇಲ್ಲದಾಗಿದೆ ಎಂದು ಕಾರ್ಮಿಕರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

Comments are closed.