Airport: ಥೈಲ್ಯಾಂಡ್‌ನಿಂದ ಮುಂಬೈಗೆ ವಾಪಸಾಗುತ್ತಿದ್ದ ಪ್ರಯಾಣಿಕನ ಲಗೇಜ್‌ನಲ್ಲಿ 48 ವಿಷಕಾರಿ ಹಾವುಗಳು ಪತ್ತೆ!

Share the Article

Airport: ಥೈಲ್ಯಾಂಡ್‌ನಿಂದ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (Airport) ಆಗಮಿಸಿದ ಪ್ರಯಾಣಿಕನೊಬ್ಬನ ಲಗೇಜ್‌ನಲ್ಲಿ ಬರೋಬ್ಬರಿ 48 ವಿಷಕಾರಿ ಹಾವುಗಳು ಮತ್ತು 5 ಆಮೆಗಳು ಪತ್ತೆಯಾಗಿರುವ ಘಟನೆ ನಡೆದಿದೆ.


ಮುಂಬೈ ವಿಮಾನ ನಿಲ್ದಾಣದಲ್ಲಿ ಅಧಿಕಾರಿಗಳು ರಾತ್ರಿಯ ತಪಾಸಣೆಯ ಸಮಯದಲ್ಲಿ ಥೈಲ್ಯಾಂಡ್‌ನಿಂದ ಆಗಮಿಸಿದ ಪ್ರಯಾಣಿಕನೊಬ್ಬನ ಲಗೇಜ್‌ನಲ್ಲಿ 48 ವಿಷಕಾರಿ ಹಾವುಗಳು ಮತ್ತು ಐದು ಆಮೆಗಳನ್ನು ಕಂಡುಹಿಡಿದಿದ್ದಾರೆ. ಅಲ್ಲದೇ ಜೇಡ ಬಾಲದ ಕೊಂಬಿನ ವೈಪ‌ರ್ ಮತ್ತು ಇಂಡೋನೇಷಿಯನ್ ಪಿಟ್ ವೈಪರ್ ಕೂಡಾ ಸೇರಿತ್ತು.

ವರದಿಗಳ ಪ್ರಕಾರ ಪ್ರಯಾಣಿಕ ಭಾರತೀಯನೇ ಆಗಿದ್ದು, ಇತ್ತೀಚೆಗೆ ಥೈಲ್ಯಾಂಡ್‌ಗೆ ಹೋಗಿದ್ದ. ಆತ ಭಾರತಕ್ಕೆ ವಾಪಸಾಗುವ ವೇಳೆ ತನ್ನ ಲಗೇಜ್‌ಗಳ ಮೂಲಕ ವನ್ಯಜೀವಿಗಳನ್ನು ಸಾಗಿಸಲು ಯತ್ನಿಸಿದ್ದಾನೆ. ಪ್ರಯಾಣಿಕನ ಹೆಸರನ್ನು ಅಧಿಕಾರಿಗಖು ಇನ್ನೂ ಬಹಿರಂಗಪಡಿಸಿಲ್ಲ. ಭದ್ರತಾ ಸಂಸ್ಥೆಗಳು ಪ್ರಯಾಣಿಕನ ವಿರುದ್ಧ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಿವೆ ಮತ್ತು ಅವನ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Comments are closed.