DMart: ಡಿ ಮಾರ್ಟ್ ನಲ್ಲಿ ಯಾವಾಗ ಹೆಚ್ಚು ಡಿಸ್ಕೌಂಟ್ ಸಿಗುತ್ತೆ? ಯಾವಾಗ ಶಾಪಿಂಗ್ ಮಾಡಿದ್ರೆ ಒಳ್ಳೆಯದು?

DMart: ದಿನನಿತ್ಯ ಬಳಕೆಯ ವಸ್ತುಗಳನ್ನು ಕೊಳ್ಳಲು ಒಂದು ಸುಲಭವಾದ ಮಳಿಗೆಯೆಂದರೆ ಡಿ ಮಾರ್ಟ್. ಈ ಡಿ ಮಾರ್ಟ್ ಪ್ರತಿದಿನವೂ ಅನೇಕ ರಿಯಾಯಿತಿಗಳನ್ನು ನೀಡುತ್ತದೆ.ಆದರೆ ಎಲ್ಲಾ ವಸ್ತುಗಳು ರಿಯಾಯಿತಿಯಲ್ಲಿ ಲಭ್ಯವಿರುವಾಗ ಅದಕ್ಕಾಗಿ ಯಾವುದೇ ನಿರ್ದಿಷ್ಟ ದಿನ ಅಥವಾ ಸಮಯ ಎಂದು ಇರುವುದಿಲ್ಲ. ಆದಾಗ್ಯೂ ಕೂಡಇಲ್ಲಿ MRP ಗಿಂತಲೂ ಕಡಿಮೆ ಬೆಲೆಗೆ ವಸ್ತುಗಳನ್ನು ಮಾರಾಟ ಮಾಡಲಾಗುತ್ತೆ.
ವಾರಾಂತ್ಯ ಮತ್ತು ಸೋಮವಾರ ಕ್ಲೀನ್-ಅಪ್ ಸೇಲ್ ಅನ್ನೋದನ್ನು ಇಲ್ಲಿ ಕಾಣಬಹುದು. ವಾರಾಂತ್ಯದ ಮಾರಾಟ (ಶುಕ್ರವಾರ-ಭಾನುವಾರ) ಶುಕ್ರವಾರದಿಂದ ಭಾನುವಾರದವರೆಗೆ ಗ್ರಾಹಕರ ಸಂಖ್ಯೆ ಹೆಚ್ಚಾಗುತ್ತದೆ. ಈ ಒಂದು ಅವಧಿಯಲ್ಲಿ, FMCG, ದಿನಸಿ, ಬಟ್ಟೆ ಮತ್ತು ಸೌಂದರ್ಯ ಉತ್ಪನ್ನಗಳ ಮೇಲೆ ವಿಶೇಷ ಕೊಡುಗೆಗಳು ಲಭ್ಯವಿರುತ್ತದೆ. ಕೆಲವು ಅಂಗಡಿಗಳು ಬೈ 1 ಗೆಟ್ 1 ಫ್ರೀ ಸಹ ನೀಡುತ್ತವೆ.
ಸೋಮವಾರಗಳು ಕೆಲವೊಮ್ಮೆ ‘ಕ್ಲೀನ್ ಅಪ್ ಸೇಲ್’ ಆಗಿರುತ್ತವೆ, ಭಾನುವಾರದ ನಂತರ ಕೆಲವು ಅಂಗಡಿಗಳಲ್ಲಿ ಇರುವ ಸರಕುಗಳ ಸ್ಟಾಕ್ ಕ್ಲಿಯರೆನ್ಸ್ ದಿನ ಇದಾಗಿದ್ದು, ಈ ಸಮಯದಲ್ಲಿ ಕೆಲವು ಆಯ್ದ ವಸ್ತುಗಳ ಮೇಲೆ ಸ್ವಲ್ಪ ಹೆಚ್ಚಿನ ರಿಯಾಯಿತಿಯನ್ನು ಪಡೆಯಬಹುದಾಗಿದೆ.
ಡಿಮಾರ್ಟ್ ರೆಡಿ ಆ್ಯಪ್ ಕೆಲವೊಮ್ಮೆ ಆನ್‌ಲೈನ್ ಡೀಲ್‌ಗಳನ್ನು ಹೊಂದಿದ್ದು, ನೀವು ಡಿಮಾರ್ಟ್ ರೆಡಿ ಬಳಸುವ ಮೂಲಕ, ಕೆಲವು ದಿನಗಳಲ್ಲಿ ಆನ್‌ಲೈನ್ ಡೀಲ್‌ಗಳು ಮತ್ತು ಕೂಪನ್‌ಗಳನ್ನು ಪಡೆಯಬಹುದು. ಹಾಗೂ ಇಲ್ಲಿ ಹಬ್ಬದ ಸೀಸನ್‌ಗಳಲ್ಲಿ ಹಲವು ಉತ್ತಮ ಆಫರ್ ಗಳಿದ್ದು, ಈ ಸಮಯದಲ್ಲಿ ಖರೀದಿಸುವುದು ಬೆಸ್ಟ್.
ಆದಾಗ್ಯೂ, ಶುಕ್ರವಾರದಿಂದ ಭಾನುವಾರದವರೆಗೆ ಮತ್ತು ಹಬ್ಬದ ಅವಧಿಯಲ್ಲಿ ಉತ್ತಮ ಕೊಡುಗೆಗಳು ಲಭ್ಯವಿರುತ್ತದೆ ಎಂದು ಹೇಳಲಾಗಿದೆ.
Comments are closed.